ಮಂಡ್ಯ: ಡಿಸೆಂಬರ್ 20, 21ರಂದು ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ( School and College Holiday ) ಎರಡು ದಿನ ರಜೆಯನ್ನು ಘೋಷಿಸಿ, ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕುಮಾರ ಅವರು ಆದೇಶ ಹೊರಡಿಸಿದ್ದು, ದಿನಾಂಕ: 20-12-2024 ರಿಂದ ದಿನಾಂಕ: 22-12-2024 ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ನಗರದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಬಳಿಯ ಅಮರಾವತಿ ಹೋಟೆಲ್ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸ್ಥಳದಲ್ಲಿ ನಡೆಯಲಿದೆ. ಸದರಿ ಸಮ್ಮೇಳನ ಕಾರ್ಯಕ್ರಮಕ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ಸಚಿವರುಗಳು, ನ್ಯಾಯಾಧೀಶರುಗಳು ಹಾಗೂ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದು, ಸದರಿ ಗಣ್ಯ ವ್ಯಕ್ತಿಗಳಿಗೆ ಮತ್ತು ನೋಂದಾಯಿತ ಪ್ರತಿನಿಧಿಗಳಿಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಾಸ್ತವ್ಯಕ್ಕೆ ಕೊಠಡಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದಿದ್ದಾರೆ.
ಆದ್ದರಿಂದ ಅಲ್ಲದೇ, ಜಿಲ್ಲೆಯ ಸಮಸ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮ್ಮೇಳವನ್ನು ಯಶಸ್ವಿಗೊಳಿಸಬೇಕಾಗಿರುತ್ತದೆ, ಆದ್ಯರಿಂದ ದಿನಾಂಕ: 20.12.2004 ಮತ್ತು 21.12.2024 ರಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಕನ್ನಡದ ಐಕ್ಯತೆಯ ಧೋತಕವಾಗಿ ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗವಹಿಸುವ ಮೂಲಕ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳವ ಮತ್ತು ಕನ್ನಡ ನಾಡು ನುಡಿ ಬಗ್ಗೆ ವಿವಿಧ ಗೋಷ್ಠಿಗಳು ಇರುವುದರಿಂದ ಜ್ಞಾನಾರ್ಜನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದಿನಾಂಕ:20-12-2024 ಮತ್ತು 21-12-2024 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಿದ್ದಾರೆ.
ಸದರಿ ರಜೆ ಅವಧಿಯನ್ನು ಸರ್ಕಾರಿ ರಜಾ ದಿನದಂದು ಸರಿದೂಗಿಸಿ ಪಾಠ-ಪುವಚನ ನಡೆಸಲು ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಮಂಡ್ಯ ರವರು ಅಗತ್ಯ ಕ್ರಮಕ್ಕೆ ಗೊಳ್ಳುವಂತೆ ಸೂಚಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BIG UPDATE: ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ದೋಣಿ ಮುಳುಗಿ ಭೀಕರ ದುರಂತ: 13 ಮಂದಿ ಸಾವು
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!