ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದ ನಾಟಕ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಮೃತಪಟ್ಟಿದ್ದಾರೆ.
46 ವರ್ಷದ ಕಲಾವಿದ ನಂಜಯ್ಯ ರಂಗಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ವೇದಿಕೆಯ ಮೇಲೆಯೇ ಉಸಿರುಚೆಲ್ಲಿದ್ದಾರೆ. ಘಟನೆ ಬಳಿಕ ಸಹಕಲಾವಿದರು ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ್ದಾರೆ.
BREAKING NEWS: ಮಾರಕಾಸ್ತ್ರಗಳಿಂದ ಕೊಚ್ಚಿ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನ ಭೀಕರ ಕೊಲೆ
ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಡ್ರಾಮಾಸೀನ್ಸ್ ಸೆಟ್ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿ ಕಲಾವಿದ ನಂಜಯ್ಯ ಪ್ರಾಣ ಬಿಟ್ಟಿದ್ದಾರೆ.