ಚಿತ್ರದುರ್ಗ: ಗುರಾಯಿಸಿದ ಎನ್ನುವ ಕಾರಣದಿಂದಾಗಿ ಉಂಟಾದಂತ ಜಗಳ ತಾರಕಕ್ಕೇರಿ, ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರಿನ ಕೃಷ್ಣರಾಜಪುರ ರಸ್ತೆಯಲ್ಲಿ ಸಮಿವುಲ್ಲಾ (35) ಎಂಬಾತ ಗುರಾಯಿಸಿದ ಎನ್ನುವ ಕಾರಣಕ್ಕಾಗಿ ನೂತನ್ ಎಂಬಾತನೊಂದಿಗೆ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿದ್ದರಿಂದಾಗಿ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ.
ತೀವ್ರವಾಗಿ ಗಾಯಗೊಂಡ ಸಮೀವುಲ್ಲಾ ಅವರನ್ನು ಹಿರಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕುವಿನಿಂದ ಇರಿದು ಹತ್ಯೆಗೈದ ನೂತನ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.