ಬೆಂಗಳೂರು: ವಾಕಿಂಗ್ ಗೆ ತೆರಳಿದ್ದಂತ ಆ ವ್ಯಕ್ತಿಯೊಬ್ಬ, ಜೇಬಿನಲ್ಲಿ ಅಮೂಲ್ಯ ವಸ್ತುಗಳಿದ್ದಂತ ಪರ್ಸ್ ಕಳೆದುಕೊಂಡಿದ್ದನು. ಆದ್ರೇ ಹೀಗೆ ಕಳೆದುಕೊಂಡಿದ್ದಂತ ಪರ್ಸ್ ಮರಳಿ ಆತನ ಕೈಗೆ ಅಮೂಲ್ಯ ದಾಖಲೆಗಳೊಂದಿಗೆ ತಲುಪಿದೆ. ಅದು ಹೇಗೆ ಎನ್ನುವ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿ ಮುಂದೆ ಓದಿ.
ವಿಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಡಿ.03, 2022ರಂದು ತಬ್ರೇಜ್ ಅನ್ವರ್ ಎಂಬುವರು ವಾಕಿಂಗ್ ಗೆ ತೆರಳಿದ್ದಂತ ವೇಳೆಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಡ್ ಕಾರ್ಟ್, ಒರಿಜಿನಲ್ ಡಿಎಲ್, ಬ್ಯಾಂಕ್ ಚೆಕ್ ಇದ್ದಂತ ಪರ್ಸ್ ಕಳೆದುಕೊಂಡಿದ್ದರು.
ಹೀಗೆ ಕಳೆದುಕೊಂಡಿದ್ದು ಅವರು ವಾಕಿಂಗ್ ಬಳಿಕ, ಹೋಟೆಲ್ ಗೆ ತೆರಳಿ ಟಿಫಿನ್ ಮಾಡಿ, ಅದರ ಬಿಲ್ ಕೊಡೋದಕ್ಕೆ ಪರ್ಸ್ ಹುಡುಕಾಡಿದಾಗ ಗಮನಕ್ಕೆ ಬಂದಿತ್ತು. ಈ ಬಗ್ಗೆ ಇ-ಲಾಸ್ಟ್ ನಲ್ಲಿ ಕೂಡಲೇ ದೂರು ನೀಡಿದ್ದರು.
ವಿಜಯನಗರ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್ ಅವರಿಗೆ ವ್ಯಕ್ತಿಯೊಬ್ಬ ಕರೆಮಾಡಿ, ಇಲ್ಲಿ ಒಬ್ಬರಿಗೆ ಪರ್ಸ್ ಸಿಕ್ಕಿರೋದಾಗಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದಂತ ಅವರು, ಆ ಪರ್ಸ್ ಪರಿಶೀಲಿಸಿದಾಗ ತಬ್ರೇಜ್ ಅನ್ವರ್ ಅವರ ಡಿಎಲ್, ಕ್ರೆಡಿಟ್, ಡೆಬಿಟ್ ಕಾರ್ಡ್ ಹಾಗೂ ಬ್ಯಾಂಕ್ ಆಫ್ ಬರೋಡ ಚೆಕ್ ಇರೋದು ಕಂಡು ಬಂದಿತ್ತು. ಆದ್ರೇ ಅದರಲ್ಲಿ ಯಾವುದೇ ದೂರವಾಣಿ ಸಂಖ್ಯೆ ಇರಲಿಲ್ಲ.
ಕೂಡಲೇ ಪರ್ಸ್ ನಲ್ಲಿ ಸಿಕ್ಕಂತ ಬ್ಯಾಂಕ್ ಚೆಕ್ ನ ಬ್ಯಾಂಕ್ ಗೆ ತೆರಳಿದಂತ ಎಎಸ್ಐ ಜಗದೀಶ್ ಅವರು, ಚೆಕ್ ನಲ್ಲಿನ ತಬ್ರೇಜ್ ಅನ್ವರ್ ದೂರವಾಣಿ ಸಂಖ್ಯೆ ನೀಡುವಂತೆ ಕೋರಿಕೊಂಡಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ಅವರ ನಂಬರ್ ನೀಡಿದ್ದಾರೆ. ಆ ದೂರವಾಣಿಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಿಲ್ಲ.
ಈ ಬಳಿಕ ತಬ್ರೇಜ್ 10ಕ್ಕೂ ಹೆಚ್ಚು ಬಾರಿ ಕರೆ ಮಾಡಿದಂತ ಸಂಖ್ಯೆಗೆ ಮರಳಿ ಕರೆ ಮಾಡಿದಾಗ, ತಾವು ವಿಜಯನಗರ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್. ನಿಮ್ಮ ಪರ್ಸ್ ಸಿಕ್ಕಿದೆ ಎಂಬುದಾಗಿ ತಿಳಿಸಿದ್ದಾರೆ. ಈ ವಿಷಯ ತಿಳಿದು ಖುಷಿಯಾದಂತ ತಬ್ರೇಜ್, ಜಗದೀಶ್ ಭೇಟಿಯಾಗಿ ಅವರ ಪರ್ಸ್ ಪಡೆದಿದ್ದಾರೆ. ಈ ಮೂಲಕ ವಾಕಿಂಗ್ ನಲ್ಲಿ ಕಳೆದುಕೊಂಡಿದ್ದಂತ ಪರ್ಸ್ ಮರಳಿ ಅವರ ಕೈ ಸೇರಿದೆ.
ಹೀಗೆ ಪರ್ಸ್ ತಲುಪಿಸಿದಂತ ಎಎಸ್ಐ ಜಗದೀಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿರುವಂತ ಅವರು, ಪರ್ಸ್ ನಲ್ಲಿ ಇದ್ದ ಅಲ್ಪ ಹಣ ಹೋಗಿದ್ದಕ್ಕೆ ಚಿಂತೆಯಿಲ್ಲ. ನನ್ನ ಓರಿಜಿನಲ್ ಡಿಎಲ್, ಬ್ಯಾಂಕ್ ಚೆಕ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮರಳಿ ಸಿಕ್ಕಿದೆ. ಬ್ಯಾಂಕ್ ಚೆಕ್ ಮೂಲಕ ನನ್ನ ನಂಬರ್, ವಿಳಾಸ ಪಡೆದು ಮರಳಿಸಿದಂತ ಜಗದೀಶ್ ಸರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಅಧಿಕಾರಿಗಳಿಂದ ಪೊಲೀಸ್ ಇಲಾಖೆಯ ಬಗ್ಗೆ ಮತ್ತಷ್ಟು ಗೌರವ ಹೆಚ್ಚುವಂತೆ ಆಗಿದೆ ಎಂದು ಹೇಳಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
Good News : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ತೆರಿಗೆದಾರರಿಗೆ ಬಿಗ್ ರಿಲೀಫ್, ಅವಧಿ ವಿಸ್ತರಣೆ |Income Tax