ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದಂತೆ ಬಸ್ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವಂತ ಟರ್ಮಿನಲ್-3ರಲ್ಲಿ ಆಂಧ್ರ ಸಾರಿಗೆ ಬಸ್ ನಿಲ್ಲಿಸಲಾಗಿತ್ತು. ಈ ಟರ್ಮಿನಲ್-3ರಲ್ಲಿ ಆಂಧ್ರ ಸಾರಿಗೆ ಬಸ್ ಗೆ ಒರಗಿ ಬೆಳಗಾವಿ ಜಿಲ್ಲೆಯ ಖಾನಾಪುರದ ಭೂಷಣ್ ಪಾಟೀಲ್(30) ಎಂಬಾತ ನಿಂತಿದ್ದನು.
ಬಸ್ಸಿಗೆ ಒರಗಿ ನಿಂತಿರುವಂತ ಭೂಷಣ್ ಪಾಟೀಲ್ ಗಮನಿಸದಂತ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಚಾಲಕ ಬಸ್ ಅನ್ನು ಚಾಲನೆ ಮಾಡಿಕೊಂಡು ಹೊರಟಾಗ ಕಳಗೆ ಬಿದ್ದಂತ ಆತನ ಮೇಲೆ ಬಸ್ ಹರಿದಿದೆ. ಈ ಹಿನ್ನಲೆಯಲ್ಲಿ ಭೂಷಣ್ ಪಾಟೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಾಮರಾಜನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿದ ಕಲ್ಲಿದ್ದಲು ಗಣಿ: 15ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ