ಮೀರತ್: ಮದುವೆಯ ನಂತರ ತೂಕ ಹೆಚ್ಚುತ್ತಿದ್ದರಿಂದ ತನ್ನ ಪತಿ ‘ತ್ರಿವಳಿ ತಲಾಖ್’ ನೀಡಿದ್ದಾನೆ ಅಂತ ಮುಸ್ಲಿಂ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಮೀರತ್ ನಿವಾಸಿ 28 ವರ್ಷದ ನಜ್ಮಾ ಬೇಗಂ ತನ್ನ ದೂರಿನಲ್ಲಿ ಮೊಹಮ್ಮದ್ ಸಲ್ಮಾನ್ ನನ್ನು ಮದುವೆಯಾಗಿ ಎಂಟು ವರ್ಷಗಳಾದವು ಎಂದು ತಿಳಿಸಿದ್ದಾಳೆ. ಮದುವೆಯ ನಂತರದ ವರ್ಷಗಳಲ್ಲಿ ನನ್ನ ತೂಕವನ್ನು ಹೆಚ್ಚಿದೆ. ಇದರಿಂದ ನನ್ನ ಪತಿ ನನ್ನ ಹಿಂಸಿಸಲು ಪ್ರಾರಂಭಿಸಿದನು ಎಂದು ನಜ್ಮಾ ಆರೋಪಿಸಿದ್ದಾರೆ.
ನಜ್ಮಾ ಬೇಗಂ ದೂರಿನ ಮೇರೆಗೆ, ಪೊಲೀಸರು ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಿಥೋರ್ ಪ್ರದೇಶದಲ್ಲಿರುವ ತನ್ನ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆ ಕಳೆದ ತಿಂಗಳಿನಿಂದ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ. ದಂಪತಿಗೆ ಏಳು ವರ್ಷದ ಮಗನೂ ಇದ್ದಾನೆ ಎನ್ನಲಾಗಿದೆ. ಆಗಸ್ಟ್ 28 ರಂದು ಸಲ್ಮಾನ್ ಇತರ ಐದು ಜನರೊಂದಿಗೆ ನನ್ನ ಹೆತ್ತವರ ಮನೆಗೆ ಬಂದು ನನ್ನ ಥಳಿಸಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊತ್ವಾಲಿ ಮೀರತ್ ವೃತ್ತ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ಅವರು “ತನಿಖೆ ನಡೆಯುತ್ತಿದೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದರೆ.