ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಷ್ಠಿತ ಕಂಪನಿಗಳಲ್ಲಿಉನ್ನತ್ತವಾದ ಹುದ್ದೆಯನ್ನು ಪಡೆಯಬೇಕೆಂದು ಪ್ರತಿಯೊಬ್ಬರಿಗೆ ಕನಸಿರುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಾರೆ. ಅದರಂತೆ ವ್ಯಕ್ತಿಯೊಬ್ಬ ಗೂಗಲ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಒಂದಲ್ಲ, ಎರಡಲ್ಲ ಬರೋಬ್ಬರಿ 39ನೇ ಪ್ರಯತ್ನದಲ್ಲಿ ಕೆಲಸ ಪಡೆದಿದ್ದಾನೆ. ಈತನ ಕಥೆ ಜನರನ್ನು ಪ್ರೇರಿಪಿಸುತ್ತಿದೆ.
GOLD ಪ್ರಿಯರಿಗೆ ಗುಡ್ ನ್ಯೂಸ್ : ಬಂಗಾರದ ಬೆಲೆ ಭಾರಿ ಇಳಿಕೆ; 4 ತಿಂಗಳಲ್ಲಿ 5,000 ರೂ. ಡೌನ್| Gold prices
ಫ್ರಾನ್ಸಿಸ್ಕೋದ ನಿವಾಸಿಯಾದ ಟೈಲರ್ ಕೋಹೆನ್ ಎಂಬಾತ ಟೆಕ್ ದೈತ್ಯ ಕಂಪನಿ ಗೂಗಲ್ನಲ್ಲಿ ಕೆಲಸ ಪಡೆಯಲು ಸತತ 39 ಬಾರಿ ಅರ್ಜಿ ಸಲ್ಲಿಸಿದ್ದರಂತೆ. ಅಂತಿಮವಾಗಿ ಜುಲೈ 19 ರಂದು ಅವರು ಕೆಲಸ ಪಡೆದಿದ್ದಾರೆ. ಈ ಕುರಿತಂತೆ ತಮ್ಮ ಎಲ್ಲಾ ಇಮೇಲ್ ಸಂವಹನದ ಸ್ಕ್ರೀನ್ಶಾಟ್ ಅನ್ನು ಗೂಗಲ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಮೊದಲು ಡೋರ್ಡ್ಯಾಶ್ನಲ್ಲಿ ಅಸೋಸಿಯೇಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.
BIGG NEWS : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪರಿಶ್ರಮ ಮತ್ತು ಹುಚ್ಚುತನದ ನಡುವೆ ಉತ್ತಮವಾದ ಗೆರೆ ಇದೆ. ನಾನು ಯಾವುದನ್ನು ಹೊಂದಿದ್ದೇನೆ ಎಂಬುದನ್ನು ಕಂಡುಹಿಡಿಯಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ. 39 ನಿರಾಕರಣೆಗಳಲ್ಲಿ ಒಂದು ಸ್ವೀಕೃತಗೊಂಡಿದೆ ಎಂದು ಅವರು ಕಿರು ಲಿಂಕ್ಡ್ಇನ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಇದೀಗ ಈಗ ಪೋಸ್ಟ್ ವೈರಲ್ ಆಗ್ತಿದೆ.
ಈ ಪೋಸ್ಟ್ ಅನ್ನು ಸುಮಾರು 35,000 ಜನರು ಲೈಕ್ ಮಾಡಿದ್ದು, 800 ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೊಹೆನ್ ಅವರ ಸಾಧನೆಯಿಂದ ಬಳಕೆದಾರರು ಪ್ರಭಾವಿತರಾಗಿದ್ದಾರೆ ಮತ್ತು ಹಲವಾರು ಅಭಿನಂದನಾ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವು ಬಳಕೆದಾರರು ತಮ್ಮ ಸ್ವಂತ ಅನುಭವಗಳನ್ನು ಸಹ ವಿವರಿಸಿದ್ದಾರೆ.
ಈತ ಆಗಸ್ಟ್ 25, 2019 ರಂದು ಮೊದಲ ಬಾರಿಗೆ ಗೂಗಲ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಗೂಗಲ್ ತಿರಸ್ಕರಿಸಿದೆ. ಈ ಕುರಿತಾದ ಟ್ರಯಲ್ ಮೇಲ್ಗಳ ಸ್ಕ್ರೀನ್ಶಾಟ್ ತೋರಿಸುತ್ತದೆ.
GOLD ಪ್ರಿಯರಿಗೆ ಗುಡ್ ನ್ಯೂಸ್ : ಬಂಗಾರದ ಬೆಲೆ ಭಾರಿ ಇಳಿಕೆ; 4 ತಿಂಗಳಲ್ಲಿ 5,000 ರೂ. ಡೌನ್| Gold prices