ಹಾಸನ: ದಂಪತಿಗಳ ನಡುವೆ ವೈಮನಸ್ಸು ಉಂಟಾಗಿ, ಆ ಬಳಿಕ ಕೋರ್ಟ್ ಆವರಣದಲ್ಲಿ ನಡೆದಂತ ಲೋಕ ಅಧಾಲತ್ ನಲ್ಲಿ ಒಟ್ಟಿಗೆ ಜೊತೆಯಾಗಿದ್ದು, ಇಬ್ಬರು ಸಂಸಾರ ಮಾಡುತ್ತೇವೆ ಎಂಬುದಾಗಿ ಪತಿ ಒಪ್ಪಿಕೊಂಡಿದ್ದರು. ಆದ್ರೇ.. ಕೋರ್ಟ್ ಆವರಣದ ಶೌಚಾಲಯದಲ್ಲೇ ಪತ್ನಿಯ ಕತ್ತು ಕೊಯ್ದು, ಮಗುವನ್ನು ಕೊಲ್ಲಲು ಯತ್ನಿಸಿದಂತ ಘಟನೆ ನಡೆದಿತ್ತು. ಇದೀಗ ಪತಿಯಿಂದ ಹತ್ಯೆ ಯತ್ನದಲ್ಲಿ ಗಾಯಗೊಂಡಿದ್ದಂತ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚೈತ್ರಾ ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆಲ ವರ್ಷಗಳಿಂದ ದಂಪತಿಗಳ ನಡುವೆ ವೈಮನಸ್ಸು ಮೂಡಿ, ದೂರಾಗಿದ್ದರು. ಇದೇ ಕಾರಣದಿಂದಾಗಿ ಪತ್ನಿ ಚೈತ್ರಾ ಡೈವೋರ್ಸ್ ಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.
ಹೊಳೆನರಸೀಪುರದ ಹಿರಿಯ ಸಿವಿಲ್ ಕೋರ್ಟ್ ನಲ್ಲಿ ನಡೆದಿದ್ದಂತ ಲೋಕ ಅಧಾಲತ್ ನಲ್ಲಿ ಭಾಗವಹಿಸಿದ್ದಂತ ಶಿವಕುಮಾರ್ ಹಾಗೂ ಚೈತ್ರ ಅವರನ್ನು ಒಟ್ಟಿಗೆ ಇರೋದಕ್ಕೆ ಮನವೊಲಿಸಲಾಗಿತ್ತು. ಅಂತಿಮವಾಗಿ ಶಿವಕುಮಾರ್ ಒಟ್ಟಿಗೆ ಇರುತ್ತೇವೆ. ಇನ್ಮುಂದೆ ಪತ್ನಿ ಚೈತ್ರಾಳನ್ನು ಹಾಗೂ ಮಗುವನ್ನು ಚೆನ್ನಾಗಿ ನೋಡಿಕೊಳ್ಳೋದಾಗಿಯೂ ಒಪ್ಪಿಕೊಂಡಿದ್ದರು.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಕೋರ್ಟ್ ನ ನ್ಯಾಯಾಧೀಶೆ ಹಾಗೂ ವಕೀಲರ ಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ, ಪತ್ನಿ, ಮಕ್ಕಳ ಜೊತೆ ಜೀವನ ನಡೆಸುವುದಾಗಿ ಹೇಳಿದ್ದರು. ಕೋರ್ಟ್ ನಿಂದ ಹೊರ ಬಂದ ಬಳಿಕ ಶೌಚಾಲಯಕ್ಕೆ ತೆರಳಿದ್ದಂತ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಕಿ ಚಾಕುವಿನಿಂದ ಕತ್ತುಕೊಯ್ದಿದ್ದರು. ಆ ನಂತ್ರ ಮಗುವನ್ನು ಹತ್ಯೆಗೆ ಯತ್ನಿಸಿದಂತ ವೇಳೆಯಲ್ಲಿ ಸ್ಥಳೀಯರು ತಡೆದಿದ್ದು, ಆರೋಪಿ ಶಿವಕುಮಾರ್ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರು.
ಪತ್ನಿಯ ಚಾಕು ಇರಿತಕ್ಕೆ ಒಳಗಾಗಿದ್ದಂತ ಚೈತ್ರಾ(32) ಅವರನ್ನು ಕೂಡಲೇ ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೇ.. ಹಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಚೈತ್ರಾ ಇದೀಗ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.