ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರಿನಲ್ಲಿ ನಿನ್ನೆ ಸಂಜೆ ವ್ಯಕ್ತಿಯೊಬ್ಬನ ಮೇಲೆ ಇಬ್ಬರು ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ವ್ಯಕ್ತಿಯ ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರ ಬಳಿಯ ಬೋಳೂರಿನಲ್ಲಿ ನಿನ್ನೆ ಸಂಜೆ ನವೀನ್ ಸಾಲ್ಯಾನ್ ಎಂಬಾತನ ಮೇಲೆ ದೇವದಾಸ್ ಬೋಳೂರು ಮತ್ತು ಪುತ್ರ ಸಾಯಿ ಕಿರಣ್ ಎಂಬುವರು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರೋ ಘಟನೆ ನಡೆದಿದೆ.
ಹಲ್ಲೆಗೊಳಗಾದಂತ ನವೀನ್ ಅನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಡ್ ನಿಂದ ಹಲ್ಲೆಗೊಳಗಾದಂತ ಅವರು ಗಂಭೀರವಾಗಿ ಗಾಯಗೊಂಡಿರುವಂತ ಅವರ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಹಲ್ಲೆ ಮಾಡಿದಂತ ದೇವದಾಸ್ ಹಾಗೂ ಸಾಯಿ ಕಿರಣ್ ಎಂಬುವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
BREAKING NEWS: ಬೆಚ್ಚಿಬಿದ್ದ ಬೆಂಗಳೂರು ಪೊಲೀಸರು: ‘ರೌಡಿ ಶೀಟರ್’ನಿಂದ ‘ಮಹಿಳಾ ಹೆಚ್ ಕಾನ್ ಸ್ಟೇಬಲ್’ಗೆ ಚಾಕು ಇರಿತ