ಕೋಲ್ಕತ್ತಾ: ಇಂದು ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಉದ್ಘಾಟನೆ ಸಮಾರಂಭದಲ್ಲಿ ದೊಡ್ಡ ಹೈ ಡ್ರಾಮಾ ನಡೆಯಿತು. ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದೆಇಂದ ರೈಲಿನ ಚಾಲನೆ ನೀಡಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ವೇದಿಕೆಗೆ ಬರಲು ನಿರಾಕರಿಸಿದರು.
ಬಂಗಾಳದ ಹೌರಾ ನಿಲ್ದಾಣದಲ್ಲಿ ಆಹ್ವಾನಿತ ಜನಸಮೂಹ ಒಂದು ವಿಭಾಗದಲ್ಲಿ ಗುಂಪಿನ ಜನರು ಜೈ ಶ್ರೀರಾಮ್ ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿಯವರು ವೇದಿಕೆ ಮೇಲೇರಲು ನಿರಾಕರಿಸಿದರು.
#WATCH | 'Jai Shri Ram' slogans were raised on a platform at Howrah Railway station after the arrival of West Bengal CM Mamata Banerjee at the event where Vande Bharat Express was later flagged off by PM Modi through video conferencing. pic.twitter.com/PKAWPr9zSo
— ANI (@ANI) December 30, 2022
ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಪಾಲ ಸಿವಿ ಆನಂದ ಬೋಸ್ ಸಿಎಂ ಮಮತಾ ಅವರನ್ನು ಸಮಾಧಾನಪಡಿಸಲು ಪಡಿಸಲು ಯತ್ನಿಸಿದರು. ಆದರೆ ಮುಖ್ಯಮಂತ್ರಿಗಳು ಪ್ರೇಕ್ಷಕರೊಂದಿಗೆ ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು ಎನ್ನಲಾಗುತ್ತಿದೆ.
ಇದೇ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ , ತಮ್ಮ ತಾಯಿ ಹೀರಾಬೆನ್ ಮೋದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದರು.
ಇಂದು ನಿಮಗೆ ದುಃಖದ ದಿನ ಮತ್ತು ದೊಡ್ಡ ನಷ್ಟ, ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಶಕ್ತಿಯನ್ನು ನೀಡಲಿ, ನೀವು ಪಶ್ಚಿಮ ಬಂಗಾಳಕ್ಕೆ ಬರಬೇಕಿತ್ತು. ಆದರೆ ನಿಮ್ಮ ತಾಯಿಯ ನಿಧನದಿಂದಾಗಿ ನೀವು ಬರಲು ಸಾಧ್ಯವಾಗಲಿಲ್ಲ. ಆದರೆ ವಾಸ್ತವಿಕವಾಗಿ ಸೇರಿಕೊಂಡಿದ್ದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದೇಳಿದ್ದಾರೆ.
#WATCH | West Bengal CM Mamata Banerjee expresses condolences to PM Modi, over the demise of his mother Heeraben Modi, during an event in Howrah that was attended by PM Modi through video conferencing.
(Source: DD) pic.twitter.com/qNnqaCtxSS
— ANI (@ANI) December 30, 2022
ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್, ಈಶಾನ್ಯಕ್ಕೆ ಹೆಬ್ಬಾಗಿಲು ಮತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಉದ್ಘಾಟಿಸಿದರು.
BREAKING NEWS : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆ : ಸಿಎಂ ಬೊಮ್ಮಾಯಿ
BIGG NEWS: ನ್ಯೂ ಇಯರ್ ದಿನ ಪ್ರವಾಸಿಗರಿಗೆ ಶಾಕ್; ನಂದಿಬೆಟ್ಟಕ್ಕೆ ನಿರ್ಬಂಧ, ಬಿಗಿ ಭದ್ರತೆ