ನವದೆಹಲಿ : ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಸುದ್ದಿಗೋಷ್ಟಿ ನಡೆಸಿ ಖರ್ಗೆ ಮಾತನಾಡಿದ್ದಾರೆ.
ನಾವೆಲ್ಲರೂ ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡಬೇಕು, ಪಕ್ಷದಲ್ಲಿ ಯಾರೂ ದೊಡ್ಡವರಲ್ಲ ಅಥವಾ ಸಣ್ಣವರಲ್ಲ. ಕೋಮುವಾದದ ಸೋಗಿನಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾನು ಪಕ್ಷದ ಸಿಪಾಯಿ ಮತ್ತು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು. ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದೇವೆ. ರಾಜ್ಯಗಳಲ್ಲೂ ನಾವು ಬಲಿಷ್ಠರಾಗಿದ್ದೆವು. ಅವರ ಪಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದು ಖರ್ಗೆ ಹೇಳಿದ್ದಾರೆ. ಆಂತರಿಕ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಶಶಿ ತರೂರ್ (Shashi Tharoor) ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.
ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಯಾದ ಶಶಿ ತರೂರ್ ಅವರಿಗೆ ಕೇವಲ 1072 ಮತಗಳನ್ನು ಪಡೆದಿದ್ದಾರೆ. ಈಮೂಲಕ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್(Congress)ಗೆ ಅಧ್ಯಕ್ಷೀಯ ಚುನಾವಣೆಯು ಅಕ್ಟೋಬರ್ 17 ಅಂದ್ರೆ, ಸೋಮವಾರ ನಡೆದಿತ್ತು.
Delhi | We all have to work like workers of the party, nobody is big or small in the party. We have to unitedly fight against the fascist forces that are attacking the democratic institutions under the garb of communalism: Congress President-elect Mallikarjun Kharge pic.twitter.com/LWlVoEOVRs
— ANI (@ANI) October 19, 2022
ತಮ್ಮ ‘ರಾಜಕೀಯ ಭವಿಷ್ಯ’ದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸಚಿವ ಶ್ರೀರಾಮುಲು |Sri Ramulu
ಸಾರ್ವಜನಿಕರ ಗಮನಕ್ಕೆ: ಈ ಎಲ್ಲಾ ‘ದಾಖಲೆ’ಗಳು ಕಳೆದ್ರೇ, ಹೀಗೆ ದೂರು ದಾಖಲಿಸಿ | Karnataka Police