ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯಿಂದಲೇ, ತಮ್ಮ ಪುತ್ರನಿಗೆ ಕುಮಾರಸ್ವಾಮಿ ಎಂಬುದಾಗಿ ಮಳವಳ್ಳಿಯ ವಿಜಿ ಪುರದ ದಂಪತಿಗಳು ಹೆಸರಿಡಿಸಿದ್ದಾರೆ. ಈ ಕ್ಷಣದಿಂದಾಗಿ ನನ್ನ ಹೃದಯ ತುಂಬಿ ಬಂದಿತು ಎಂದು ಮಾಜಿ ಸಿಎಂ ಹೆಚ್ ಡಿಕೆ ಹೇಳಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಪಂಚರತ್ನ ರಥಯಾತ್ರೆಯಲ್ಲಿ ಎದುರಾದ ಈ ಅಪರೂಪದ ಸನ್ನಿವೇಶ ನನ್ನ ಹೃದಯತುಂಬಿ ಬರುವಂತೆ ಮಾಡಿತು. ಮಳವಳ್ಳಿ ಕ್ಷೇತ್ರದ ಬಿಜಿ ಪುರದ ಸಹೋದರಿ ಶ್ರೀಮತಿ ರಾಣಿ ಅವರು ತಮ್ಮ ಅಣ್ಣ ಶ್ರೀ ಮಹೇಶ್ ಅವರೊಡನೆ ಬಂದು ತನ್ನ ಕಂದನಿಗೆ ‘ಕುಮಾರಸ್ವಾಮಿ’ ಎಂದು ನಾಮಕರಣ ಮಾಡಿ ಎಂದಾಗ ನಾನು ಆ ಕ್ಷಣ ಮೌನಕ್ಕೆ ಶರಣಾದೆ ಎಂದು ಹೇಳಿದ್ದಾರೆ.
ಪಂಚರತ್ನ ರಥಯಾತ್ರೆಯಲ್ಲಿ ಎದುರಾದ ಈ ಅಪರೂಪದ ಸನ್ನಿವೇಶ ನನ್ನ ಹೃದಯತುಂಬಿ ಬರುವಂತೆ ಮಾಡಿತು. ಮಳವಳ್ಳಿ ಕ್ಷೇತ್ರದ ಬಿಜಿ ಪುರದ ಸಹೋದರಿ ಶ್ರೀಮತಿ ರಾಣಿ ಅವರು ತಮ್ಮ ಅಣ್ಣ ಶ್ರೀ ಮಹೇಶ್ ಅವರೊಡನೆ ಬಂದು ತನ್ನ ಕಂದನಿಗೆ 'ಕುಮಾರಸ್ವಾಮಿ' ಎಂದು ನಾಮಕರಣ ಮಾಡಿ ಎಂದಾಗ ನಾನು ಆ ಕ್ಷಣ ಮೌನಕ್ಕೆ ಶರಣಾದೆ.1/3#ಪಂಚರತ್ನ_ರಥಯಾತ್ರೆ#ಮಳವಳ್ಳಿ #ಮಂಡ್ಯ pic.twitter.com/5DtLBuG1Di
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2022
ಇನ್ನೂ ಒಳ್ಳೆಯ ಹೆಸರು ಇಡಿ ತಾಯಿ, ನನ್ನ ಹೆಸರು ಏತಕ್ಕೆ? ಎಂದಾಗ, ” ನಿಮ್ಮ ಹೆಸರಿಗಿಂತ ಇನ್ನೊಂದು ಹೆಸರು ಬೇಕಾ ಅಣ್ಣಾ” ಎಂದು ಆ ಸಹೋದರಿ ಮರುಪ್ರಶ್ನೆ ಹಾಕಿದಾಗ ನಾನು ನಿರುತ್ತರನಾದೆ. ಬಹಳ ಸಂತೋಷದಿಂದ ಆ ತಂಗಿಯ ಕಂದನಿಗೆ ‘ ಕುಮಾರಸ್ವಾಮಿ ‘ ಎಂದು ನಾಮಕರಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಒಳ್ಳೆಯ ಹೆಸರು ಇಡಿ ತಾಯಿ, ನನ್ನ ಹೆಸರು ಏತಕ್ಕೆ? ಎಂದಾಗ, " ನಿಮ್ಮ ಹೆಸರಿಗಿಂತ ಇನ್ನೊಂದು ಹೆಸರು ಬೇಕಾ ಅಣ್ಣಾ" ಎಂದು ಆ ಸಹೋದರಿ ಮರುಪ್ರಶ್ನೆ ಹಾಕಿದಾಗ ನಾನು ನಿರುತ್ತರನಾದೆ. ಬಹಳ ಸಂತೋಷದಿಂದ ಆ ತಂಗಿಯ ಕಂದನಿಗೆ ' ಕುಮಾರಸ್ವಾಮಿ ' ಎಂದು ನಾಮಕರಣ ಮಾಡಿದ್ದೇನೆ.2/3
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2022
ಆ ಭಗವಂತ ಆ ಕಂದನಿಗೆ, ಆ ಸಹೋದರಿಯ ಕುಟುಂಬ ಹಾಗೂ ತವರು ಮನೆಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಆ ಕಂದನ ಬಾಳು ಬಂಗಾರವಾಗಲಿ ಎಂದು ಹಾರೈಸಿದ್ದಾರೆ.
ಆ ಭಗವಂತ ಆ ಕಂದನಿಗೆ, ಆ ಸಹೋದರಿಯ ಕುಟುಂಬ ಹಾಗೂ ತವರು ಮನೆಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಆ ಕಂದನ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತೇನೆ.3/3#ಪಂಚರತ್ನ_ರಥಯಾತ್ರೆ #ಮಳವಳ್ಳಿ #ಮಂಡ್ಯ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2022