ಬೆಂಗಳೂರು : ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ ಸಂಬಂಧ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2022ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ “ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ” ಪಂಚಾಯಿತಿಗಳನ್ನಾಗಿಸಲು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಾಗೂ 01 ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು ಸುತ್ತೋಲೆಯನ್ನುಹೊರಡಿಸಲಾಗಿದೆ.
ಸದರಿ ಸುತ್ತೋಲೆಯಲ್ಲಿ ತಿಳಿಸಿರುವಂತೆ “ಸ್ಥಳೀಯ ಸಮುದಾಯ, ಗ್ರಾಮಸ್ಥರು ಮತ್ತು ಅಧಿಕಾರೇತರರ ಸಹಕಾರದೊಂದಿಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಈ ಅಧೀನ ಕಛೇರಿ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು, ಮುಖ್ಯಶಿಕ್ಷಕರುಗಳು ಕೋವಿಡ್ ಸುರಕ್ಷತಾ ಕ್ರಮವನ್ನು.. ಅನುಸರಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ:14.11.2022ರಿಂದ ದಿನಾಂಕ:24.01.2023ರ ವರಗೆ ನಡೆಯಲಿರುವ “ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ”ದಲ್ಲಿ ಭಾಗವಹಿಸಿ, ಇದರೊಂದಿಗೆ ನೀಡಲಾಗಿರುವ ಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿಯಂತ ಕಾರ್ಯಕ್ರಮವನ್ನುಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ನೆರವು ಸಹಕಾರವನ್ನು ನೀಡಲು ಸೂಚಿಸಿದ್ದಾರೆ.