ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಮಹತ್ವದ ಕ್ರಮವನ್ನು ಕೈಗೊಂಡಿದೆ. ಬರೋಬ್ಬರಿ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ( IPS Officer Transfer ) ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಅವರನ್ನು ಬೆಂಗಳೂರಿನ ಆಂತರೀಕ ವಿಭಾಗ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಪುನೀತ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ : ಸಚಿವ ಆರ್.ಅಶೋಕ್
ಬೆಂಗಳೂರಿನ ಎಸಿಬಿ ಎಡಿಜಿಪಿಯಾಗಿದ್ದಂತ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ, ಬೆಂಗಳೂರಿನ ಕೆ ಎಸ್ ಆರ್ ಪಿ ಎಡಿಜಿಪಿ ಆಗಿ ನೇಮಿಸಲಾಗಿದೆ. ಕೆಎಸ್ ಆರ್ ಪಿಯ ಎಡಿಜಿಪಿ ರವಿ ಎಸ್ ಅವರನ್ನು ಬೆಂಗಳೂರಿನ ಪಿ ಸಿ ಎ ಎಸ್ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದಂತ ಅಜಯ್ ಹೀಲೋರಿ ಅವರನ್ನು ಡಿಸಿ ಆರ್ ಇ ಯ ಎಸ್ಪಿಯಾಗಿ ನೇಮಿಸಲಾಗಿದೆ. ಬೆಂಗಳೂರಿನ ಎಸಿಬಿಯ ಎಸ್ಪಿಯಾಗಿದ್ದಂತ ಯತೀಶ್ ಚಂದ್ರ ಜಿ ಹೆಚ್ ಅವರನ್ನು ಕ್ರೈಂ-3 ವಿಭಾಗದ ಡಿಸಿಪಿಯಾಗಿ ನೇಮಿಸಿದೆ.
ಕಲಬುರ್ಗಿಯ ಎಸಿಬಿಯ ಎಸ್ಪಿಯಾಗಿದ್ದಂತ ಅಮರನಾಥ್ ರೆಡ್ಡಿ ವೈ ಅವರನ್ನು ಕಲಬುರ್ಗಿಯ ಆಂತರೀಕ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಶ್ರೀಹರಿ ಬಾಬು ಬಿಎಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಿದೆ.
ಹೀಗಿದೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ