ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಮಹಾ ಎಡವಟ್ಟು ಮಾಡಲಾಗಿದೆ. 2 ಲಕ್ಷ ಹೊಸ ಜಾತಿಗಣತಿ ಕೈಪಿಡಿಯನ್ನು ಆಯೋಗವು ತಿಪ್ಪೆಗೆಸೆದಿದೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದುಳಿದ ಆಯೋಗದಿಂದ ಸಲ್ಲಿಸಲಾಗಿದ್ದಂತ ವರದಿಯನ್ನು ಬಿಡುಗಡೆ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ಕೈಪಿಡಿಯನ್ನು ಸಿಎಂ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದರು.
ಸಿಎಂ ಸಿದ್ಧರಾಮಯ್ಯ ಅವರು ಜಾತಿಗಣತಿ ಕೈಪಿಡಿಯನ್ನು ಬಿಡುಗಡೆ ಮಾಡಿದ್ದರು. ಈ ಕೈಪಿಡಿಯು ಸಮೀಕ್ಷೆ ವೇಳೆ ಶಿಕ್ಷಕರಿಗೆ ನೀಡಬೇಕಾಗಿತ್ತು. ಆದರೇ ಸರ್ವೆ ವೇಳೆ ಶಿಕ್ಷಕರಿಗೆ ನೀಡಬೇಕಾಗಿದ್ದಂತ ಕೈಪಿಡಿಯನ್ನು ಮೂಲೆಗುಂಪು ಮಾಡಲಾಗಿದೆ. ಕೈಪಿಡಿಯಲ್ಲಿ ಸಾಕಷ್ಟು ದೋಷ ಹಿನ್ನಲೆಯಲ್ಲಿ 2 ಲಕ್ಷ ಕೈಪಿಡಿ ಮೂಲೆಗೆ ಎಸೆಯಲಾಗಿದೆ. ಸುಮಾರು 1 ಕೋಟಿ ಹಣ ವ್ಯಯ ಮಾಡಿ ಈ ಕೈಪಿಡಿಯನ್ನು ತಯಾರಿಸಲಾಗಿತ್ತು. ಈಗ ಮತ್ತೆ ಹೊಸ ಕೈಪಿಡಿ ತಯಾರಿಕೆಗೆ ಆಯೋಗ ಮುಂದಾಗಿದೆ.
ಮಹಿಳೆಯರು ಗ್ಯಾರಂಟಿ ಯೋಜನೆ ನೀಡಿದ ಕಾಂಗ್ರೆಸ್ ಸರ್ಕಾರದ ದನಿಯಾಗಬೇಕು: MLC ದಿನೇಶ್ ಗೂಳಿಗೌಡ
ಇಲ್ಲಿ ಅಮಾವಾಸ್ಯೆದಿಂದ ಮೋಕ್ಷದೀಪವನ್ನು ಬೆಳಗಿಸಿ, ಪೂರ್ವಜರ ಆಶೀರ್ವಾದದಿಂದ ಪ್ರಗತಿ