ಕೆ ಎನ್ ಎನ್ ಡಿಜಿಟಲ್ ಡೆಸ್ಮ್ : ‘ಮಹಾರಾಷ್ಟ್ರ ಸರ್ಕಾರ ಮತ್ತೆ ಉದ್ಧಟತನ ಮೆರೆದಿದ್ದು, ಕರ್ನಾಟಕ ಸೇರ್ಪಡೆ ಮುಂದಾಗಿದ್ದ ಗಡಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದೆ.
ಕರ್ನಾಟಕ ಸೇರ್ಪಡೆ ಮುಂದಾಗಿದ್ದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ಗ್ರಾಮದ ಜನರಿಗೆ ಮಹಾ’ ರಾಷ್ಟ್ರ ಸರ್ಕಾರ ಬೆದರಿಕೆ ಒಡ್ಡಿದ್ದು, ಗ್ರಾ.ಪಂ ವಿಸರ್ಜಿಸುವುದಾಗಿ ಬೆದರಿಕೆ ಒಡ್ಡಿದೆ.
ಕರ್ನಾಟಕ ಸೇರುವುದಾಗಿ ಗ್ರಾ.ಪಂಗಳಲ್ಲಿ ಠರಾವು ಪಾಸ್ ಸಹ ಮಾಡಿದ್ದರು. ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಸೇರುವ ಬಗ್ಗೆ ಠರಾವು ಪಾಸ್ ಮಾಡಿದ್ದಾರೆ. ಈ ಮೂಲಕ ತಾವು ಕರ್ನಾಟಕಕ್ಕೆ ಸೇರಿಯೆ ಸಿದ್ಧ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರು, ಅಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳೆ ಕರ್ನಾಟಕ ಸೇರುವ ತೀರ್ಮಾನಕ್ಕೆ ಬಂದು ಠರಾವು ಪಾಸ್ ಮಾಡಿರೋದು ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು, ಇದರಿಂದ ಗ್ರಾಮ ಅಧಿಕಾರಿಗಳನ್ನು ತೆಗೆದು ಹಾಕುವುದಾಗಿ ಮಹಾ ಸರ್ಕಾರ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರ ಸರ್ಕಾರದ ಬೆದರಿಕೆಗೆ ಹೆದರದ ಜನರು ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ, ಗ್ರಾ.ಪಂ ವಿಸರ್ಜನೆಗೆ ಹೆದರೋಲ್ಲ, ಗಲ್ಲು ಶಿಕ್ಷೆ ಕೊಟ್ಟರೂ ನಾವು ಭಯಪಡುವುದಿಲ್ಲ ಎಂದು ಜನರು ತಿರುಗೇಟು ನೀಡಿದ್ದಾರೆ.