ಬೆಳಗಾವಿ: ನಾಳೆ ಬೆಳಗಾವಿಗೆ ಭೇಟಿ ನೀಡುತ್ತೀರುವ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಭೇಟಿ ರದ್ದು ಆಗುತ್ತಿದೆ.
ಮಹಾರಾಷ್ಟ್ರ ಸಚಿವರ ಭೇಟಿ ವಿರೋಧಿಸಿ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಯಿಂದ ಪ್ರತಿಭಟನೆ
ಸಿಎಂ ಬಸವರಾಜ ಬೊಮ್ಮಾಯಿ ಅವರು, ಯಾವ ಕಾರಣಕ್ಕೂ ಈ ಪರಿಸ್ಥಿತಿಯಲ್ಲಿ ಬೆಳಗಾವಿಗೆ ಬರುವ ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಜತೆಗೆ ಮುಖ್ಯಕಾರ್ಯದರ್ಶಿಗಳ ಮೂಲಕವೂ ಅಲ್ಲಿನ ಸರ್ಕಾರಕ್ಕೆ ಸಂದೇಶ ರವಾನಿಸಲಾಗಿತ್ತು. ಇದರ ನಡುವೆಯೇ ಒಂದೊಮ್ಮೆ ಸಚಿವರು ಆಗಮಿಸಿದರೆ ಅವರನ್ನು ಗಡಿಯಲ್ಲೇ ತಡೆಯಲು ಬಗ್ಗೆಯೂ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು ಎನ್ನಲಾಗಿದೆ. ಎಲ್ಲ ವಿಚಾರಗಳನ್ನು ಗಮನಿಸಿಕೊಂಡು ಮಹಾರಾಷ್ಟ್ರದ ಸಚಿವರು ಬೆಳಗಾವಿ ಭೇಟಿಗೆ ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಸರ್ಕಾರದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರ ಬೆಳಗಾವಿ ಭೇಟಿ ರದ್ದತಿಯ ಪರೋಕ್ಷ ಸುಳಿವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಸ್ ಅವರು ನೀಡಿದ್ದಾರೆ.