ಬೆಂಗಳೂರು: ಕರ್ನಾಟಕದ ಮೂರು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ.
ದಿನಾಂಕ 15-11-2024ರ ನಾಳೆ ಬೆಳಿಗ್ಗೆ 9.55ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಂಬೈ ಏರ್ಪೋರ್ಟ್ ತಲುಪಲಿರುವಂತ ಅವರು, ಅಲ್ಲಿಂದ ರಸ್ತೆಯ ಮೂಲಕ ಸಾಗಿ ಮುಂಬೈ ವೆಸ್ಟ್ ವಿಧಾನಸಭಾ ಕ್ಷೇತ್ರವಾದಂತ ಬಿವಂಡಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಸಂಜೆ 5 ಗಂಟೆಗೆ ಚಾಂದಿವಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವಂತ ಅವರು, ರಾತ್ರಿ 7.55ಕ್ಕೆ ಮುಂಬೈನಿಂದ ವಿಮಾನದಲ್ಲಿ ಹೊರಟು, ಬೆಂಗಳೂರನ್ನು ರಾತ್ರಿ 9.55ಕ್ಕೆ ತಲುಪಲಿದ್ದಾರೆ.
ದಿನಾಂಕ 16-11-2024ರಂದು ಮರು ದಿನ ಬೆಳಿಗ್ಗೆ 9 ಗಂಟೆಗೆ ಹೆಚ್ ಎಎಲ್ ಏರ್ ಪೋರ್ಟ್ ನಿಂದ ವಿಶೇಷ ಏರ್ ಕ್ರಾಫ್ಟ್ ಮೂಲಕ ಮಹರಾಷ್ಟ್ರದ ಸೊಲ್ಲಾಪುರ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 11 ಗಂಟೆಗೆ ತಲುಪಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಜಟ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಅಕ್ಕಲಕೋಟ್ ವಿಧಾನಸಭಾ ಕ್ಷೇತ್ರ, ರಾತ್ರಿ 8 ಗಂಟೆಗೆ ಸೋಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಬೇಟೆಯಲ್ಲಿ ತೊಡಗಲಿದ್ದಾರೆ.
ನ.16ರಂದು ಸೊಲಾಪುರದಲ್ಲಿಯೇ ಉಳಿದುಕೊಳ್ಳಲಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್, ದಿನಾಂಕ 17-11-2024ರಂದು ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಲಾತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಪ್ರಚಾರ ನಡೆಸಲಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ | Power Cut In Bengaluru
ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ