Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

​ಲಂಡನ್ ನಲ್ಲಿ 36ನೇ ಮಹಡಿಯಿಂದ ಬಿದ್ದು ಭಾರತೀಯ ಮೂಲದ ದಂಪತಿ ಮತ್ತು 9 ವರ್ಷದ ಬಾಲಕ ಸಾವು!

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ನಾಳೆಯಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಪ್ರಾರಂಭ : ವಿದ್ಯಾರ್ಥಿಗಳಿಗೆ ‘KSRTC-BMTC’ ಬಸ್‌ಗಳಲ್ಲಿ ಉಚಿತ ಪ್ರಯಾಣ !
KARNATAKA

ರಾಜ್ಯಾದ್ಯಂತ ನಾಳೆಯಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಪ್ರಾರಂಭ : ವಿದ್ಯಾರ್ಥಿಗಳಿಗೆ ‘KSRTC-BMTC’ ಬಸ್‌ಗಳಲ್ಲಿ ಉಚಿತ ಪ್ರಯಾಣ !

By kannadanewsnow57

ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ತಯಾರಿ ಅಂತಿಮ ಘಟ್ಟ ತಲುಪಿದೆ. ಫೆಬ್ರವರಿ 28ರ ನಾಳೆಯಿಂದ ಮಾರ್ಚ್ 17ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಶಿಕ್ಷಣ ಇಲಾಖೆಯು ಪರೀಕ್ಷಾ ಅಕ್ರಮ ತಡೆಯಲು ಮತ್ತು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (KSRTC), ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಫೆಬ್ರವರಿ 28 ರಿಂದ ಆರಂಭವಾಗಲಿರುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

KSRTC ಬಸ್ ಗಳಲ್ಲಿ ಉಚಿತ ಪ್ರಯಾಣ : ಪ್ರವೇಶ ಪತ್ರವೇ ಬಸ್ ಪಾಸ್!

ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಸ್ವಂತ ವಿದ್ಯಾಸಂಸ್ಥೆಗಿಂತ ಬೇರೆಡೆ ನಿಯೋಜನೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಈ ಕೆಳಗಿನ ಮಾರ್ಗಸೂಚಿಗಳ ಅನ್ವಯ ಸೌಲಭ್ಯ ಪಡೆಯಬಹುದು:

ದಿನಾಂಕ: 2026ರ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ (ಪರೀಕ್ಷೆ ನಡೆಯುವ ದಿನಗಳಂದು ಮಾತ್ರ).

ಅಗತ್ಯ ದಾಖಲೆ: ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಪ್ರವೇಶ ಪತ್ರ (Hall Ticket) ತೋರಿಸುವುದು ಕಡ್ಡಾಯ.

ಬಸ್ಸುಗಳ ವಿವರ: ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ (Ordinary & Express) ಬಸ್ಸುಗಳಲ್ಲಿ ಈ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ.

ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

BMTC ಬಸ್ ಗಳಲ್ಲಿ ಉಚಿತ ಪ್ರಯಾಣ

2025-26 ನೇ ಸಾಲಿನ ಪಿ.ಯು.ಸಿ ಪರೀಕ್ಷೆ-1 ರ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಶಾಲಾ/ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ ಎಂದಿದೆ.

2025-26 ನೇ ಸಾಲಿನ ಪಿ.ಯು.ಸಿ ಪರೀಕ್ಷೆ-1 ದಿನಾಂಕ 28.02.2026 ರಿಂದ 17.03.2026 ರವರೆಗೆ ನಡೆಯಲಿದ್ದು, ಪರೀಕ್ಷೆಯು ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಇರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಳಕಂಡಂತೆ ಸೌಲಭ್ಯಗಳನ್ನು ಕಲ್ಪಿಸಿರುತ್ತದೆ.

ಪಿ.ಯು.ಸಿ ಪರೀಕ್ಷೆ-1 ರ ವಿದ್ಯಾರ್ಥಿಗಳಿಗೆ ದಿನಾಂಕ 28.02.2026 ರಿಂದ 17.03.2026 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಪಿ.ಯು.ಸಿ ಪರೀಕ್ಷೆ-1 ರ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೋಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಪರೀಕ್ಷಾ ವೇಳಾಪಟ್ಟಿ ಮತ್ತು ಸಮಯ

ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10:00ರಿಂದ ಮಧ್ಯಾಹ್ನ 1:00ರವರೆಗೆ ನಡೆಯಲಿವೆ. ಪ್ರಮುಖ ದಿನಾಂಕಗಳು ಹೀಗಿವೆ:

ಫೆಬ್ರವರಿ 28: ಕನ್ನಡ, ಅರೇಬಿಕ್

ಮಾರ್ಚ್ 3: ಇಂಗ್ಲಿಷ್

ಮಾರ್ಚ್ 5: ಇತಿಹಾಸ

ಮಾರ್ಚ್ 6: ಭೌತಶಾಸ್ತ್ರ

ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ

ಮಾರ್ಚ್ 10: ಅರ್ಥಶಾಸ್ತ್ರ

ಮಾರ್ಚ್ 13: ರಾಜ್ಯಶಾಸ್ತ್ರ

ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ

ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ

`Second PUC Exam' begins across the state from tomorrow: Free travel for students on `KSRTC-BMTC' buses!
Share. Facebook Twitter LinkedIn WhatsApp Email

Related Posts

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

2 Mins Read

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

2 Mins Read

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

2 Mins Read
Recent News

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

​ಲಂಡನ್ ನಲ್ಲಿ 36ನೇ ಮಹಡಿಯಿಂದ ಬಿದ್ದು ಭಾರತೀಯ ಮೂಲದ ದಂಪತಿ ಮತ್ತು 9 ವರ್ಷದ ಬಾಲಕ ಸಾವು!

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

​ಏಕಪಕ್ಷೀಯ ಆಳ್ವಿಕೆಯಿಂದ 24/7 ಡಿಜಿಟಲ್ ಯುಗದವರೆಗೆ: ಜವಾಹರಲಾಲ್ ನೆಹರೂ ದಾಖಲೆ ಮುರಿದ ಪ್ರಧಾನಿ ಮೋದಿ!

State News
KARNATAKA

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ನೂತನ ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅವರು ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.…

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.