ಮುಂಬೈ: ಹಣೆಗೆ ‘ಬಿಂದಿ’ ಇಡದ ದೂರದರ್ಶನದ ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ಬಲಪಂಥೀಯ ನಾಯಕ ಸಂಭಾಜಿ ಭಿಡೆ ಅವರು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭಿಡೆ ಭೇಟಿ ಮಾಡಿದ ನಂತರ ಕ್ಯಾಮೆರಾದಲ್ಲಿ ಸೆರೆಯಾದ ಘಟನೆ ನಡೆದಿದೆ.
ಭಿಡೆ ಅವರು ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ನಿರಾಕರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೊವೊಂದರಲ್ಲಿ, ಭಿಂಡೆ ಮರಾಠಿಯಲ್ಲಿ ಮಹಿಳಾ ವರದಿಗಾರರಿಗೆ ತನ್ನ ಬೈಟ್ ತೆಗೆದುಕೊಳ್ಳಲು ಬರುವ ಮೊದಲು ಬಿಂದಿಯನ್ನು ಹಾಕಬೇಕೆಂದು ಹೇಳುವುದನ್ನು ಕೇಳಬಹುದು. ಅಷ್ಟೇ ಅಲ್ಲದೇ, ಮಹಿಳೆ ಭಾರತ ಮಾತೆಯನ್ನು ಹೋಲುತ್ತಾಳೆ. ಅವಳು ಬಿಂದಿಗೆ ಹಾಕದೆ ‘ವಿಧವೆ’ಯಂತೆ ಕಾಣಿಸಿಕೊಳ್ಳಬಾರದು ಎಂದು ವರದಿಗಾರ್ತಿಗೆ ಹೇಳುವದನ್ನು ಕೇಳಬಹುದು.
मी लेक सावित्री-जिजाऊची …
मनुस्मृती नाकारणारी…#freedom pic.twitter.com/HbXC6LsjqL— Rupali B. B (@rupa358) November 2, 2022
ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಭಿಡೆ ಅವರ ಹೇಳಿಕೆಗಳಿಗೆ ವಿವರಣೆಯನ್ನು ಕೋರಿ ನೋಟಿಸ್ ಜಾರಿಗೊಳಿಸಿದ್ದಾರೆ.
BREAKING NEWS: BMTC ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು: ಸಾರ್ವಜನಿಕರಿಂದ ಚಾಲಕನಿಗೆ ಬಿತ್ತು ಗೂಸಾ
BREAKING NEWS: BMTC ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು: ಸಾರ್ವಜನಿಕರಿಂದ ಚಾಲಕನಿಗೆ ಬಿತ್ತು ಗೂಸಾ