ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವಂತ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವಂತ ಜನರು ಅರೆನಗ್ನ ವಸ್ತ್ರ ಧರಿಸಿ, ತೆರಳೋದಕ್ಕೆ ನಿಷೇಧ ಹೇರಲಾಗಿದೆ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವಂತ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲೇ ರಥ ಬೀದಿಯಿಂದ, ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸೋದಕ್ಕೆ ನಿಷೇಧ ವಿಧಿಸಲಾಗಿದೆ.
BIG NEWS: ಆಸ್ಟ್ರೇಲಿಯಾದ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಶಿಪ್ನಲ್ಲಿ 800 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್
ಈ ಸಂಬಂಧ ಮಹಾಬಲೇಶ್ವರ ದೇವಸ್ಥಾನದ ಮೇಲುಸ್ತುವಾರಿ ಕಮಿಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಕಮಿಟಿಯಿಂದ ದೇವಸ್ಥಾನದ ಬಳಿಯಲ್ಲಿಯೇ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಸ್ಥಾನದ ರಥದ ನಿಲುಗಡೆ ಸ್ಥಳದಿಂದ ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ದ್ವಾರದವರೆಗಿನ ಪ್ರದೇಶದಲ್ಲಿ ಅರೆ-ಬರೆ ಉಡುಪುಗಳನ್ನು ಧರಿಸಿ, ಸಂಚರಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ALEART: ನಿಮ್ಮ ಮೊಬೈಲ್ ಕಳೆದು ಹೋಗಿದ್ಯಾ? ಪೋನ್ ಪೇ, ಗೂಗಲ್ ಪೇ ಬಗ್ಗೆ ಈ ಎಚ್ಚರಿಕೆ ಕೂಡಲೇ ವಹಿಸಿ.!
ಅಂದಹಾಗೇ ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ದ್ವಾರದವರೆಗಿನ ರಸ್ತೆಯಲ್ಲಿ ಅರೆ ಬರೆ ಉಡುಪು ಧರಿಸಿ ಸುತ್ತಾಡುವವರೇ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದ ಮೇಲುಸ್ತುವಾರಿ ಸಮಿತಿಯು ಇಂತಹ ನಿರ್ಧಾರವನ್ನು ಕೈಗೊಂಡಿದೆ.