ಅಂಕಾರಾ: ವಾಯುವ್ಯ ಟರ್ಕಿಯ ಪಟ್ಟಣದಲ್ಲಿ ಬುಧವಾರ ಮುಂಜಾನೆ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು ಟರ್ಕಿಯ ಸರ್ಕಾರ ನಡೆಸುತ್ತಿರುವ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ ತಿಳಿಸಿದೆ.
ಇಸ್ತಾನ್ಬುಲ್ನಿಂದ ಪೂರ್ವಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಡಜ್ ಪ್ರಾಂತ್ಯದ ಗೋಲ್ಕಯಾ ಪಟ್ಟಣದಲ್ಲಿ, ಭೂಮಿಯಿಂದ 2 ಕಿಮೀ ಆಳದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇಸ್ತಾಂಬುಲ್ ಮತ್ತು ರಾಜಧಾನಿ ಅಂಕಾರಾದಲ್ಲಿ ಭೂಕಂಪನದ ಅನುಭವವಾಗಿದೆ. ಇದರಿಂದಾಗಿ ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ ಮತ್ತು ಈ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿದೆ ಡಜ್ನ ಮೇಯರ್ ಫರುಕ್ ಓಜ್ಲು ತಿಳಿಸಿದ್ದಾರೆ.
ಸಾವ-ನೋವು ಅಥವಾ ಹಾನಿಯ ಯಾವುದೇ ತಕ್ಷಣದ ವರದಿಯಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಓಜ್ಲು ಹೇಳಿದರು.
1999 ರಲ್ಲಿ ಸಂಭವಿಸಿದ ಪ್ರಬಲವಾದ ಭೂಕಂಪದಿಂದ ಸುಮಾರು 800 ಜನರನ್ನು ಕೊಂದಿತ್ತು.
BIGG NEWS : ಶಂಕಿತ ಉಗ್ರ ‘ಶಾರೀಕ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನರಳಾಟ’ : ಪೊಲೀಸರಲ್ಲಿ ಹೆಚ್ಚಿದ ಟೆನ್ಷನ್
HEALTH TIPS: ʻಮಧುಮೇಹʼ ನಿಯಂತ್ರಣಕ್ಕೆ ʻದೀರ್ಘ ಉಸಿರಾಟʼ ಹೆಚ್ಚು ಪರಿಣಾಮಕಾರಿ | Deep Breathing
BIGG NEWS : ಶಂಕಿತ ಉಗ್ರ ‘ಶಾರೀಕ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನರಳಾಟ’ : ಪೊಲೀಸರಲ್ಲಿ ಹೆಚ್ಚಿದ ಟೆನ್ಷನ್