ಕ್ಯಾಲಿಫೋರ್ನಿಯಾ : ಇಂದು ಮೆಕ್ಸಿಕೋದ ಗಲ್ಫ್ ಆಫ್ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.
ಭೂಕಂಪವು 10 ಕಿಮೀ (6.21 ಮೈಲುಗಳು) ಆಳವನ್ನು ಹೊಂದಿತ್ತು. ಘಟನೆಯಲ್ಲಿ ಸಾವು-ನೋವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು USGS ಹೇಳಿದೆ.
ಮೊದಲು, ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಭೂಕಂಪವನ್ನು 5.8 ರ ತೀವ್ರತೆಯನ್ನು ಹೊಂದಿತ್ತು. ಇದು ಬಹಿಯಾ ಡಿ ಕಿನೋ ಪ್ರದೇಶದ ದಕ್ಷಿಣಕ್ಕೆ 56 ಕಿಮೀ ದೂರದಲ್ಲಿದೆ ಎಂದು ಮಾಹಿತಿ ನೀಡಿದೆ.