ಬೆಂಗಳೂರು: ನಗರದಲ್ಲಿ ಐಷಾರಾಮಿ ಕಾರಿನಿಂದ ರಸ್ತೆಯಲ್ಲೇ ಡ್ರಿಫ್ಟಿಂಗ್ ಮಾಡಿದ್ದರ ಸಂಬಂಧ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅವರು ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾಯಾಲಯದಿದಂ ರಿಕ್ಕಿ ರೈಗೆ ಜಾಮೀನು ಮಂಜೂರು ಮಾಡಲಾಗಿದೆ.
ರಿಕ್ಕಿ ರೈ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್, ಜಾಮೀನು ಮಂಜೂರು ಮಾಡಿದೆ. ಐಎಂವಿ 184, 189, ಬಿಎನ್ಎಸ್ 281ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದರ ಹಿನ್ನಲೆಯಲ್ಲಿ ಕೋರ್ಟ್ ಗೆ ಜಾಮೀನು ಕೋರಿ ರಿಕ್ಕಿ ರೈ ಅರ್ಜಿ ಸಲ್ಲಿಸಿದ್ದರು.
ಇಂದು ಕಾರು ಡ್ರಿಫ್ಟಿಂಗ್ ಮಾಡಿದ್ದ ಪ್ರಕರಣದಲ್ಲಿ ರಿಕ್ಕಿ ರೈಗೆ ಜಾಮೀನು ಮಂಜೂರು ಮಾಡಲಾಗಿದೆ. ಕೋರ್ಟ್ ಗೆ ಖುದ್ದು ಹಾಜರಾಗಿ ಜಾಮೀನನ್ನು ರಿಕ್ಕಿ ರೈ ಪಡೆದಿದ್ದಾರೆ. ಅವರ ವಿರುದ್ಧ ಬಿಎನ್ಎಸ್ 281, ಮೋಟರ್ ವೆಹಿಕಲ್ ಆಕ್ಟ್ 189ರಡಿ ಎಫ್ಐಆರ್ ದಾಖಲಾಗಿತ್ತು.
ರೂಪಾಯಿ ಮೌಲ್ಯ ಪಾತಾಳಕ್ಕೆ: ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 94 ಗಡಿ ದಾಟಿದ ಭಾರತೀಯ ಕರೆನ್ಸಿ!
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








