ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯಲ್ಲಿ ಹೆದ್ದಾರಿಯಲ್ಲಿಯೇ ಐಷಾರಾಮಿ ಕಾರೊಂದು ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಬೆಂಕಿ ಕಾಣಿಸಿಕೊಂಡಂತೆ ಕಾರಿನಲ್ಲಿದ್ದವರು ಹೊರ ಓಡಿ ಬಂದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ.
BIG BREAKING NEWS: ಐಸಿಸಿ ಮಾಧ್ಯಮ ಹಕ್ಕು ಪಡೆದ ಡಿಸ್ನಿ ಸ್ಟಾರ್ – ಐಸಿಸಿ ಘೋಷಣೆ | ICC media rights
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿ.ಹೊಸೂರು ಗೇಟ್ ಬಳಿಯಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಐಶಾರಾಮಿ ಕಾರೊಂದು ಕೆಟ್ಟು ನಿಂತಿತ್ತು. ಆ ಕಾರನ್ನು ರಿಪೇರಿ ಮಾಡುವಂತ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಹೀಗೆ ಕಾಣಿಸಿಕೊಂಡ ಬೆಂಕಿ ಕಂಡ ಕೂಡಲೇ ಕಾರು ರಿಪೇರಿ ಮಾಡುತ್ತಿದ್ದಂತವರು ಸೇರಿದಂತೆ ಮಾಲೀಕರು ದೂರ ಓಡಿ ಬಂದಿದ್ದಾರೆ.
‘ವಾಹನ ಚಾಲನಾ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಉಚಿತ ತರಬೇತಿಗಾಗಿ ಬಿಎಂಟಿಸಿಯಿಂದ ಅರ್ಜಿ ಆಹ್ವಾನ
ಕಾರಿನ ಇಂಜಿನ್ ನಲ್ಲಿ ಕಾಣಿಸಿಕೊಂಡಂತ ಬೆಂಕು ಕ್ಷಣಮಾತ್ರದಲ್ಲಿ ಕಾರಿನ ಎಲ್ಲಾ ಭಾಗಕ್ಕೆ ವ್ಯಾಪಿಸಿದ ಪರಿಣಾಮ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಾರು ಹೊತ್ತಿ ಉರಿದಿದೆ. ಕಾರು ಬೆಂಕಿಯಿಂದಾಗಿ ( Car Fire ) ಹೊತ್ತಿ ಉರಿಯುತ್ತಿದ್ದ ಕಾರಣ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸಂಚಾರ ಅರ್ಧ ಗಂಟೆಗೂ ಹೆಚ್ಚುಕಾಲ ಬಂದ್ ಆಗಿದೆ. ಹೀಗಾಗಿ ವಾಹನ ಸವಾವರರು, ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಟ್ರಾಫಿಕ್ ನಲ್ಲಿ ಸಿಲುಕುವಂತೆ ಆಯ್ತು.
‘ಬೆಂಗಳೂರು-ಮೈಸೂರು ವಾಹನ ಸವಾರ’ರ ಗಮನಕ್ಕೆ: ಇಂದಿನಿಂದ 3 ದಿನ ಈ ‘ಪರ್ಯಾಯ ಮಾರ್ಗ’ದಲ್ಲಿ ಸಂಚರಿ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಆಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅದೃಷ್ಠವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವರದಿ : ಗಿರೀಶ್ ರಾಜ್, ಮಂಡ್ಯ