ಲಕ್ನೋ : ಲುಲು ಮಾಲ್ನಲ್ಲಿ ನಮಾಜ್ ಮಾಡುತ್ತಿದ್ದ ನಾಲ್ವರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ. ಮಾಲ್ ನಲ್ಲಿ ನಮಾಜ್ ಮಾಡುತ್ತಿರುವ ಜನರ ಗುಂಪನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರಿ ವಿವಾದವೊಂದು ಭುಗಿಲೆದ್ದಿದೆ.
ಘಟನೆಯ ನಂತರ ಅಖಿಲ ಭಾರತ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತು ಮತ್ತು ಮಾಲ್ ಅನ್ನು ಬಹಿಷ್ಕರಿಸುವಂತೆ ಹಿಂದೂಗಳನ್ನು ಕೇಳಿತು. ವೈರಲ್ ವಿಡಿಯೋ ಕುರಿತು ಲುಲು ಮಾಲ್ ವಿರುದ್ಧ ಸಂಘಟನೆಯು ಲಕ್ನೋ ಪೊಲೀಸರಿಗೆ ದೂರು ನೀಡಿದೆ.