ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪ್ರೀತಿ ಮಾಡುವ ಪ್ರತಿ ಯುವಕರು ಯುವತಿಯರನ್ನು ಮೆಚ್ಚಿಸಲು ಏನಾದರೂ ಸರ್ಕಸ್ ಮಾಡಲೇಬೇಕು, ಇನ್ನೂ ಪ್ರೇಮ ನಿವೇದನೆ ವಿಷಯಕ್ಕೆ ಹೋದರೆ ಯುವಕರು ವಿಭಿನ್ನ ಪ್ರಯತ್ನ ಮಾಡುತ್ತಲೇ ಇರ್ತಾರೆ, ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರೇಯಿಸಿಗೆ ಬಹಳ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಕುಚ್ ಕುಚ್ ಹೋತಾ ಹೈ ಚಿತ್ರದ ಮಿಲ್ ಗಯಾ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಪೋಸ್ ಮಾಡಿದ್ದಾನೆ. ಹೌದು, ಅದು ಕೂಡ ಐಫೆಲ್ ಟವರ್ ಮುಂದೆ ನಿಂತು ಮ್ಯಾರಿ ಮೀ ಎಂದು ಹೂವುಗಳ ದಳ ಹಾಗೂ ಮೇಣದ ಬತ್ತಿಯಿಂದ ಬಹಳ ಸೊಗಸಾಗಿ ಅಲಂಕರಿಸಿದ್ದಾನೆ. ನಂತರ ಪ್ರಪೋಸ್ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
😭😭
I don't know who this gentleman is. I'm sure he means well.
But no. JUST NO. pic.twitter.com/f5uibsTZCn— Sachin Tandon (@cugwmui) October 15, 2022
ನ.11 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ : ಕಟೀಲ್ ನೇತೃತ್ವದಲ್ಲಿ ನಾಳೆ ಬಿಜೆಪಿ ಸಿದ್ಧತಾ ಸಭೆ
ಕರ್ನಾಟಕದ ಜನತೆಗೆ ಸಿಹಿ ಸುದ್ದಿ: ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ವೇಳಾಪಟ್ಟಿ