ನರಸಿಂಹರಾಜಪುರ : ಲಂಚ ಸ್ವೀಕರಿಸುತ್ತಿದ್ದ ಎನ್ ಆರ್ ಪುರ ಸಿಪಿಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನಲ್ಲಿ ನಡೆದಿದೆ.
ಎನ್ ಆರ್ ಪುರ ಸಿಪಿಐ ವಸಂತ್ ಶಂಕರ್ ಭಾಗವತ್ ಅವರು 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ವಶಕ್ಕೆ ಪಡೆದಿದ್ದ ಲಾರಿ ಬಿಡುಗಡೆಗಾಗಿ ಮುಸ್ತಫಾ ಅಲಿ ಎಂಬುವವರ ಬಳಿ 10 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ವಸಂತ್ ಶಂಕರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.