Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಲೋಕಸಭಾ ಚುನಾವಣೆ’ಗೆ 2ನೇ ಹಂತದ ಮತದಾನ : ರಾಜ್ಯ ಸರ್ಕಾರದಿಂದ ಇಂದು ‘ಸಾರ್ವತ್ರಿಕ ರಜೆ’ ಘೋಷಣೆ
KARNATAKA

‘ಲೋಕಸಭಾ ಚುನಾವಣೆ’ಗೆ 2ನೇ ಹಂತದ ಮತದಾನ : ರಾಜ್ಯ ಸರ್ಕಾರದಿಂದ ಇಂದು ‘ಸಾರ್ವತ್ರಿಕ ರಜೆ’ ಘೋಷಣೆ

By kannadanewsnow57
vidhana soudha
vidhana soudha

ಬೆಂಗಳೂರು: ಇಂದು ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ 14 ಜಿಲ್ಲೆಗಳಲ್ಲಿ ನಡೆಯಲಿದೆ. ನಾಳೆ ನಡೆಯಲಿರುವಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿ ಆದೇಶಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಅದರಲ್ಲಿ ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ:26.04.2024ರ ಶುಕ್ರವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತ ಹಾಗೂ ಶೋರಾಪುರ-36 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದಿನಾಂಕ:07.05.2024ರ ಮಂಗಳವಾರದಂದು ನಡೆಸುತ್ತಿದೆ ಎಂದಿದ್ದಾರೆ.

ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ದಿನಾಂಕ:26.04.2024 ಮತ್ತು ದಿನಾಂಕ:07.05.2024ರಂದು ನಡೆಯುವ ಚುನಾವಣೆಗೆ ಕೆಳಗಿನ ಅಂಕಣದಲ್ಲಿ ನಮೂದಿಸಿರುವ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದಾರೆ.

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುಜಾಪತಿನಿಧಿ ಕಾಯ್ದೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಈ ಮೂಲಕ ಆದೇಶಿಸಿದ್ದಾರೆ.

ದಿನಾಂಕ:26.04.2024 ಮತ್ತು 07.05.2024ರಂದು ಸಾರ್ವತ್ರಿಕ ರಜೆಯನ್ನು Negotiable Instrument Act 1881ರ ಪ್ರಕಾರವು ಸಹ ಘೋಷಿಸಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಹೇಳಿದ್ದಾರೆ.

ದಿನಾಂಕ  07.05.2024ರಂದು ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವಿವರಗಳನ್ನು ಕೆಳಗಿನ ಅಂಕಣದಲ್ಲಿ ನೀಡಲಾಗಿದೆ.

 ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಣೆ

  1. ಚಿಕ್ಕೋಡಿ
  2. ಬೆಳಗಾವಿ
  3. ಬಾಗಲಕೋಟೆ
  4. ವಿಜಯಪುರ
  5. ಕಲಬುರಗಿ
  6. ರಾಯಚೂರು
  7. ಬೀದರ್
  8. ಕೊಪ್ಪಳ
  9. ಬಳ್ಳಾರಿ
  10. ಹಾವೇರಿ
  11. ಧಾರವಾಡ
  12. ಉತ್ತರ ಕನ್ನಡ
  13. ದಾವಣಗೆರೆ
  14. ಶಿವಮೊಗ್ಗ

ದಿನಾಂಕ:07.05.2024ರಂದು ಚುನಾವಣಾ ಕ್ಷೇತ್ರದ ಹೆಸರು ನಡೆಯಲಿರುವ ವಿಧಾನಸಭಾ ಉಪ ಚುನಾವಣೆ -36-ಸುರಪುರ, ಯಾದಗಿರಿ ಜಿಲ್ಲೆಯಲ್ಲಿಯೂ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.

'ಲೋಕಸಭಾ ಚುನಾವಣೆ'ಗೆ 2ನೇ ಹಂತದ ಮತದಾನ : ರಾಜ್ಯ ಸರ್ಕಾರದಿಂದ ಇಂದು 'ಸಾರ್ವತ್ರಿಕ ರಜೆ' ಘೋಷಣೆ Lok Sabha elections : State government declares 'general holiday' today
Share. Facebook Twitter LinkedIn WhatsApp Email

Related Posts

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

1 Min Read

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

2 Mins Read

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

2 Mins Read
Recent News

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

‘ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು!’: ಸುಪ್ರೀಂ ಕೋರ್ಟ್

State News
KARNATAKA

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್‌ಗಾಗಿ ಸಾರ್ವಜನಿಕರು…

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.