ಪಂಜಾಬ್ : ಯಾವುದೇ ಚುನಾವಣೆ ಇರಲಿ ಅಭ್ಯರ್ಥಿಗಳು ಭರ್ಜರಿಯಾಗಿ ರ‍್ಯಾಲಿ, ಸಮಾವೇಶ ನಡೆಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸರ್ಕಸ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇದರ ನಡುವೆ ಇಬ್ಬರು ಅಭ್ಯರ್ಥಿಗಳು ಜೈಲಿನಲ್ಲಿದ್ದುಕೊಂಡೇ ಈ ಬಾರಿ ಗೆಲುವು ಸಾಧಿಸಿದ್ದಾರೆ.
ಹೌದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖಲಿಸ್ತಾನಿ ಪರ ಹೋರಾಟಗಾರ ಅಮೃತಪಾಲ್ ಸಿಂಗ್ ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕುಲ್ಲೀರ್‌ಸಿಂಗಾ ಜೀರಾ ವಿರುದ್ಧ 1.97 ಲಕ್ಷ ಅಂತರದಿಂದ ಜಯ ಸಾಧಿಸಿದ್ದಾರೆ. ಇನ್ನು ಕಾಶ್ಮೀರದ ಬಾರಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ರಶೀದ್ ಗೆಲುವು ಪಡೆದಿದ್ದಾರೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ವರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಅಬ್ದುಲ್ಲಾ ವಿರುದ್ದ ವಿರುದ್ದ ಅಬ್ದುಲ್ ಅಬ್ದುಲ್ ರಶೀದ್ ಸ್ಪರ್ಧಿಸಿದ್ದು, 1 ಲಕ್ಷ ಮತ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಯೋತ್ಪಾದನಾ ಕಾನೂನಿನಡಿಯಲ್ಲಿ 2019ರಲ್ಲಿ ರಶೀದ್ ಅವರ ಬಂಧನವಾಗಿತ್ತು. ರಶೀದ್ ಪರ ಅವರ ಪುತ್ರ ಅಬ್ರಾರ್ ಪ್ರಚಾರ ನಡೆಸಿದ್ದರು.