ಎಡಿಟರ್‌ಡೆಸ್ಕ್: ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಎರಡು ತಿಂಗಳುಗಳ ಕಾಲ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿದ್ದು, ಈ ನಡುವೆ ಎಲ್ಲರ ಚಿತ್ತ ಈ ಬಾರಿ ಯಾರು ದೆಹಲಿ ಗದ್ದುಗೆಯನ್ನು ಏರಲಿದ್ದಾರೆ ಎನ್ನುವುದನ್ನು ಕಾಯುತ್ತಿದ್ದಾರೆ.
ಹ್ಯಾಟ್ರಿಕ್ ಅಧಿಕಾರದ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ದಶದಕದ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಇಂಡಿಯಾ ಒಕ್ಕೂಟ ಕನಸು ಕಾಣುತ್ತಿದೆ. ಇವೆಲ್ಲದರ ನಡುವೆ ಎಕ್ಸಿಟ್ ಸರ್ವೆ ಕೂಡ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಅಂಥ ಭವಿಶ್ಯ ನುಡಿದಿದೆ.
ಈ ನಡುವೆ ನಾಳೆ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ ಇಂದು (ಜೂ.03) ಮಧ್ಯಾಹ್ನ 12.30ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದೆ.
ಈ ನಡುವೆ ಸುದ್ದಿ ದುನಿಯಾದಲ್ಲಿ ಹಲವು ಮಾಧ್ಯಮಗಳಿಗೆ ಪೈಪೋಟಿ ನೀಡುತ್ತ ಓದುಗರ ದೊರೆಗಳ ಸಹಕಾರದಿಂದ ಸಾಗುತ್ತಿರುವ ಕನ್ನಡ ನ್ಯೂಸ್ ನೌ ಎಂದಿನ ಹಾಗೇ ನಾಳೆ ಕೂಡ ಕ್ಷಣದ ಚುನಾವಣಾ ಫಲಿತಾಂಶದ ಅಪ್ಡೇಟ್ಸ್ ಅನ್ನು ಬೆಳಗ್ಗೆ ಆರರಿಂದ ಹೊಸ ಸರ್ಕಾರ ರಚನೆಯಾಗುವ ತನಕ ಮಾಹಿತಿಯನ್ನು ನೀಡುತ್ತದೆ. ನಮ್ಮ ನುರಿತ, ವೃತ್ತಿಪರ ಪತ್ರಕರ್ತರ ತಂಡವು ನಿಮಗೆ ಫಲಿತಾಂಶ ದುನಿಯಾದಲ್ಲಿ ಅತಿವೇಗವಾಗಿ ನಿಖರವಾಗಿ ನೀಡಲು ಸಿದ್ದವಾಗಿದೆ ಅಂಥ ಸಂಪಾದಕೀಯ ತಂಡವು ತಿಳಿಸಲು ಹೆಮ್ಮೆ ಪಡುತ್ತದೆ. ಇದಲ್ಲದೇ ದೇಶದ ಸುದ್ದಿ ಅಗ್ರಿಗೇಟ್ರಟರ್ ಆಪ್ ಆದ Dailyhunt ನಲ್ಲಿ ಕೂಡ ನೀವು ಸುದ್ದಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಆಪ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ: https://play.google.com/store/apps/details?id=com.eterno&hl=en_IN