ನವದೆಹಲಿ: ಐಸಿಐಸಿಐ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಮತ್ತು ದೀಪಕ್ ಕೊಚ್ಚಾರ್ ಅವರನ್ನು ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಸಿಬಿಐ ಮೂರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದೆ.
Covid19: ನಿಮಗೆ ಗೊತ್ತಾ ಈಗ ಹೆಚ್ಚಿನ ಆತಂಕ ಸೃಷ್ಠಿಸಿರುವ ಬಿಎಫ್.7 ಒಮಿಕ್ರಾನ್ ಉಪತಳಿ 2 ವರ್ಷಗಳ ಹಿಂದೆಯೇ ಪತ್ತೆ.!
ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಬ್ಯಾಂಕ್ ಮಂಜೂರು ಮಾಡಿದ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಮುಂಬೈ ವಿಶೇಷ ನ್ಯಾಯಾಲಯವು ಡಿ.26ರವರೆಗೆ ಮೂರು ದಿನ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿತ್ತು.
CBI gets three-day custody of former MD & CEO of ICICI bank Chanda Kochhar & Deepak Kochhar arrested in the alleged ICICI bank -Videocon loan fraud case https://t.co/ux9CYm7dhv
— ANI (@ANI) December 24, 2022