ರಸ್ತೆಯಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆಗೆ ಇಬ್ಬರು ಶಾಲಾ ಮಕ್ಕಳು ಸಹಾಯ ಹಸ್ತ ಚಾಚಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಮಹಿಳೆಯೊಬ್ಬರು ಹಣ್ಣಿನ ಗಾಡಿಯನ್ನು ರಸ್ತೆಯಿಂದ ಎತ್ತರದ ಬದಿಯೊಂದಕ್ಕೆ ತಳ್ಳಲು ಹೆಣಗಾಡುತ್ತಿರುತ್ತಾರೆ. ಆದ್ರೆ, ಇಲ್ಲಿ ಓಡಾಡುತ್ತಿದ್ದವರು ಯಾರು ಕೂಡ ಆಕೆಯ ಸಹಾಯಕ್ಕೆ ಬರುವುದಿಲ್ಲ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಪುಟ್ಟ ಶಾಲಾ ಮಕ್ಕಳು ಈ ಮಹಿಳೆಗೆ ಗಾಡಿ ತಳ್ಳಲು ಸಹಾಯ ಮಾಡಿದ್ದಾರೆ. ಇದರ ಕೃತಜ್ಞತೆಗಾಗಿ ಮಹಿಳೆ ಮಕ್ಕಳಿಗೆ ಬಾಳೆಹಣ್ಣನ್ನು ನೀಡಿದ್ದಾಳೆ.
आपकी डिग्री सिर्फ़ एक काग़ज़ का टुकड़ा है, अगर वो आपके व्यवहार में ना दिखे तो। pic.twitter.com/eHsuTYOGrh
— Mahant Adityanath 2.0🦁 (@MahantYogiG) August 8, 2022
ಮಹಂತ್ ಆದಿತ್ಯನಾಥ್ ಎಂಬುವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮಕ್ಕಳನ್ನು ಶ್ಲಾಘಿಸಿದ್ದಾರೆ.
BIGG NEWS: ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಭೆ; ಪ್ರವೀಣ್ ಹತ್ಯೆಯ ಪ್ರಮುಖ ಹಂತಕನ ಬಂಧನ ಕುರಿತು ಚರ್ಚೆ