Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಗೃಹಲಕ್ಷ್ಮಿ ಬೆನ್ನಲ್ಲೇ `ಗೃಹಜ್ಯೋತಿ ಯೋಜನೆ’ಗೆ ಮೇಜರ್ ಸರ್ಜರಿ; ವಾಣಿಜ್ಯ ಬಳಕೆಗೆ ಬ್ರೇಕ್.!

BREAKING : ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದ ಸಿಎಂ ಡಿ.ಕೆ ಶಿವಕುಮಾರ್

BREAKING : ಪಾಕಿಸ್ತಾನದಲ್ಲಿ ವಾಯು ಸೇನೆಯ ತರಬೇತಿ ವಿಮಾನ ಪತನ : ಇಬ್ಬರು ಪೈಲಟ್ ಸಜೀವ ದಹನ | Video Viral

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಹುತ್ವದ ಸಂಸ್ಕೃತಿ ಮುಂದುವರೆಯಲಿ: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ
KARNATAKA

ಬಹುತ್ವದ ಸಂಸ್ಕೃತಿ ಮುಂದುವರೆಯಲಿ: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ

By ವಸಂತ ಬಿ ಈಶ್ವರಗೆರೆ

ಮಂಡ್ಯ : ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗಕ್ಕೂ ಬಾಷೆಯಿದೆ.ಸೊಗಸಿದೆ, ಸೊಗಡಿದೆ, ಸತ್ವವಿದೆ. ಬಹುತ್ವದ ಸಂಸ್ಕೃತಿ ಮುಂದುವರೆಯಬೇಕು ಎಂದು 87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ನುಡಿದರು.

ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ‌ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಎಂಬ ಭ್ರಮೆ ಪೋಷಕರಲ್ಲಿದೆ. ಸರ್ಕಾರ ಅದನ್ನು ಹೋಗಲಾಡಿಸಬೇಕು. ದ್ವಿಭಾಷಾ ಸೂತ್ರ ಕ್ಷೇಮ, ತ್ರಿಭಾಷಾ ಹೇರುವ ಅಗತ್ಯ ಇಲ್ಲ.

ಬೇರೆ ಜಿಲ್ಲೆಗಳಲ್ಲಿ ನಿರ್ದೇಶನಾಲಯ ಕಚೇರಿಗಳು ಆಗಬೇಕು. ಅಕಾಡೆಮಿ, ಪ್ರಾಧಿಕಾರಗಳು ಇತರೆ ಜಿಲ್ಲೆಗಳಲ್ಲಿ ಇದ್ದರೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಅಂದಿನ ವ್ಯವಸ್ಥೆ ವಿರುದ್ಧದ ಪ್ರತಿಭಟನಾ ಸಾಹಿತ್ಯ. ವಚನ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪ್ರಧಾನ ಅಧ್ಯಯನ ವಿಷಯವಾಗಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯ 20-30 ಅಂತಾರಾಷ್ಟ್ರೀಯ ಭಾಷೆಗಳಿಗೆ ಅನುವಾದ ಆಗಿದ್ದು ವಚನ ಸಾಹಿತ್ಯದ ಪ್ರಸಾರ ವ್ಯಾಪಕವಾಗಬೇಕು. ಸಮಕಾಲೀನ ಸಮಸ್ಯೆಗಳಿಗೆ ವಚನದಲ್ಲಿ ಉತ್ತರವಿದೆ ಎಂದು ಹೇಳಿದರು.

ಜನಪದ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕು. ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಜನಪದ ಕಲೆಗಳಿಗೆ ಮನ್ನಣೆ ಸಿಗಬೇಕು ಎಂದರು.

ಹಾವೇರಿಯ ಜಾನಪದ ವಿಶ್ವ ವಿದ್ಯಾಲಯ ಜಗತ್ತಿನ ಏಕಮಾತ್ರ ಜಾನಪದ ವಿಶ್ವವಿದ್ಯಾಲಯ .ಇದು ಪ್ರತಿಷ್ಠೆಯ ಸಂಸ್ಥೆ ಆಗಬೇಕು ಎಂದು ಹೇಳಿದರು.

ನನ್ನ ಆರೋಗ್ಯದ ಗುಟ್ಟಿನ ಬಗ್ಗೆ ಬಹಳಷ್ಟು ಜನರು ಕೇಳುತ್ತಾರೆ. ನನಗೆ ಸಾವಿನ ಬಗ್ಗೆ ಚಿಂತೆಯಿಲ್ಲ. ನಾನು 100 ವರ್ಷ ಬದುಕುತ್ತೇನೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ. 3 ರನ್ ಬಾರಿಸಿದರೆ ಅದು ನಿಜವಾಗುತ್ತದೆ ಎಂದು‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ನುಡಿದರು.

ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ.ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ್, ಡಾ. ಪಿ. ನಾಗರಾಜು, ಡಾ. ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರು ಭಾಗವಹಿಸಿದ್ದರು.

ಪ್ರಯಾಣಿಕರ ಗಮನಕ್ಕೆ: ಗೋಲ್ಡನ್ ಚಾರಿಯಟ್ ರೈಲು ಯಾತ್ರೆ ಪುನಾರಾರಂಭ

BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ

Share. Facebook Twitter LinkedIn WhatsApp Email

Related Posts

BREAKING : ಗೃಹಲಕ್ಷ್ಮಿ ಬೆನ್ನಲ್ಲೇ `ಗೃಹಜ್ಯೋತಿ ಯೋಜನೆ’ಗೆ ಮೇಜರ್ ಸರ್ಜರಿ; ವಾಣಿಜ್ಯ ಬಳಕೆಗೆ ಬ್ರೇಕ್.!

1 Min Read

BREAKING : ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದ ಸಿಎಂ ಡಿ.ಕೆ ಶಿವಕುಮಾರ್

1 Min Read

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

3 Mins Read
Recent News

BREAKING : ಗೃಹಲಕ್ಷ್ಮಿ ಬೆನ್ನಲ್ಲೇ `ಗೃಹಜ್ಯೋತಿ ಯೋಜನೆ’ಗೆ ಮೇಜರ್ ಸರ್ಜರಿ; ವಾಣಿಜ್ಯ ಬಳಕೆಗೆ ಬ್ರೇಕ್.!

BREAKING : ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದ ಸಿಎಂ ಡಿ.ಕೆ ಶಿವಕುಮಾರ್

BREAKING : ಪಾಕಿಸ್ತಾನದಲ್ಲಿ ವಾಯು ಸೇನೆಯ ತರಬೇತಿ ವಿಮಾನ ಪತನ : ಇಬ್ಬರು ಪೈಲಟ್ ಸಜೀವ ದಹನ | Video Viral

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮುಂದಿನ ತಿಂಗಳು ಬರಲಿದೆ `IRCTC’ ಹೊಸ ವೆಬ್ ಸೈಟ್, ಕ್ಷಣಾರ್ಧದಲ್ಲಿ ಟಿಕೆಟ್ ಬುಕ್.!

State News
KARNATAKA

BREAKING : ಗೃಹಲಕ್ಷ್ಮಿ ಬೆನ್ನಲ್ಲೇ `ಗೃಹಜ್ಯೋತಿ ಯೋಜನೆ’ಗೆ ಮೇಜರ್ ಸರ್ಜರಿ; ವಾಣಿಜ್ಯ ಬಳಕೆಗೆ ಬ್ರೇಕ್.!

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಬೆನ್ನಲ್ಲೇ, ಇದೀಗ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಗೂ ಸರ್ಕಾರ ದೊಡ್ಡ…

BREAKING : ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದ ಸಿಎಂ ಡಿ.ಕೆ ಶಿವಕುಮಾರ್

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

BREAKING : ಆಭರಣ ಪ್ರೀಯರಿಗೆ ಬಿಗ್ ಶಾಕ್ : ಚಿನ್ನದ ದರ ಮತ್ತೆ ಏರಿಕೆ | Gold Price Hike

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.