ಬಳ್ಳಾರಿ : ಬೆಂಗಳೂರು ಹಾಗೂ ಮೈಸೂರಿನ ಭಾಗದ ಜನರಲ್ಲಿ ಕಾಣಿಸಿಕೊಂಡ ಚಿರತೆ ಜನರಲ್ಲಿ ಭಾರಿ ಆತಂಕ ಹುಟ್ಟಿಸಿತ್ತು. ಅಲ್ಲದೇ ಮೈಸೂರಿನ ಟಿ. ನರಸೀಪುರದಲ್ಲಿ ಯುವತಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದಳು .
ಇದೀಗ ಬಳ್ಳಾರಿಯಲ್ಲೂ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ನಂದಿಹಳ್ಳಿ ಬಳಿಯಿರುವ ಶ್ರೀ ಕೃಷ್ಣ ದೇವರಾಯ ವಿವಿಯ ಪಿಜಿ ಸೆಂಟರ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಕಳೆದ ಒಂದು ವಾರದಿಂದ ಸುತ್ತಾಮುತ್ತಾ ಚಿರತೆ ಓಡಾಡುತ್ತಿದ್ದು, ವಿದ್ಯಾರ್ಥಿಗಳು, ಸ್ಥಳೀಯರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನ್ ಇಟ್ಟಿದ್ದು, ಚಿರತೆ ಸೆರೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಆಟೋ ಡೆಬಿಟ್ ಸೌಲಭ್ಯ ಪಡೆಯುವುದು ಹೇಗೆ? ಇದರಿಂದಾಗುವ ಲಾಭ, ನಷ್ಟಗಳೇನು? ಇಲ್ಲಿದೆ ಮಾಹಿತಿ
BREAKING NEWS : ಐದು ದಶಕಗಳ ಹೋರಾಟಕ್ಕೆ ಜಯ : ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕ