ಬೆಂಗಳೂರು: ಈಗಾಗಲೇ ನಗರ ಕೆಲ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ರಾಜ್ಯ ರಾಜಧಾನಿ ಜನತೆಯಲ್ಲಿ ಭಯ ಹುಟ್ಟಿಸಿತ್ತು. ಈ ಬೆನ್ನಲ್ಲೆ ನಾಗರಬಾವಿಯಲ್ಲಿಯೂ ಎರಡು ಮರಿಗಳೊಂದಿಗೆ ಇರುವಂತ ಚಿರತೆಯೊಂದು ಪ್ರತ್ಯಕ್ಷವಾಗಿ, ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.
ಬೆಂಗಳೂರಿನ ನಾಗರಬಾವಿ ಬಳಿಯಲ್ಲಿ 2 ಮರಿ ಜೊತೆಗೆ ಚಿರತೆಯೊಂದು ಓಡಾಡುತ್ತಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರೇ ಓಡಾಡದಂತೆ ಪಂಚಾಯ್ತಿಯಿಂದ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಇನ್ನೂ ಚಿರತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ಸೆರೆಗೆ ಬೋನ್ ಇರಿಸಲಾಗಿದೆ. ಆದ್ರೇ ಈವರೆಗೂ ಬೋನಿಗೆ ಚಿರತೆ ಬಿದ್ದಿಲ್ಲ.
2 ಮರಿಗಳ ಜೊತೆಗೆ ಚಿರತೆ ಓಡಾಡುವುದನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಯಾವ ಸಂದರ್ಭದಲ್ಲಾದರೂ ಚಿರತೆ ದಾಳಿ ನಡೆಸೋ ಭೀತಿಯನ್ನು ಹುಟ್ಟು ಹಾಕಿದೆ.
ಈಗಾಗಲೇ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿರುವಂತ ಚಿರತೆಯು, ಹೊತ್ತೊಯ್ದು ತಿಂದಿರೋದಾಗಿ ತಿಳಿದು ಬಂದಿದೆ.
BIGG NEWS: ಯುಎನ್ ಮಿಷನ್ ಗೆ ‘ಭಾರತೀಯ ಮಹಿಳಾ ಶಾಂತಿಪಾಲಕರ’ ದೊಡ್ಡ ತುಕಡಿ ಸೇರ್ಪಡೆ | India Women Peacekeepers
ಹಾವೇರಿ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭಾಷಣದಲ್ಲೇ ‘ಡಬಲ್ ಎಂಜಿನ್ ಸರ್ಕಾರ’ ಟೀಕಿಸಿದ ‘ಸಾಹಿತಿ ದೊಡ್ಡರಂಗೇಗೌಡ’