ರಾಯಚೂರು : ಚಿರತೆಯನ್ನು ಹೆದರಿಸಲು ಕೈಗೆ ಸಿಕ್ಕ ಆಯುಧ ತೆಗೆದುಕೊಂಡು ಹೋಗಿದ್ದ ಮೂವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೌದು ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ರಂಗನಾಥ್ ಎಂಬಾತ ಬಹಿರ್ದೆಸೆಗೆ ಹೋದಾಗ ಚಿರತೆ ಪ್ರತ್ಯಕ್ಷವಾಗಿತ್ತು. ಇನ್ನು ಚಿರತೆ ಪ್ರತ್ಯಕ್ಷವಾದ ಬಗ್ಗೆ ರಮೇಶ್ ಮತ್ತು ಮಲ್ಲಣ್ಣನಿಗೆ ರಂಗನಾಥ್ ಮಾಹಿತಿ ನೀಡಿದ್ದು ಮೂವರು ಸೇರಿ ಆಯುಧ ತೆಗೆದುಕೊಂಡು ಚಿರತೆಗೆ ಬೆದರಿಸಲು ಯತ್ನಿಸಿದ್ದಾರೆ. ಈ ವೇಳೆ ರಂಗನಾಥ್, ಮಲ್ಲಣ್ಣ ಹಾಗೂ ರಮೇಶ್ ಮೇಲೆ ಚಿರತೆ ದಾಳಿ ನಡೆಸಿದೆ.
ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಚಿರತೆ ಕಾಣಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮುಂಚಿತವಾಗಿಯೇ ತಿಳಿಸಿದ್ದರು ಅರಣ್ಯ್ ಇಲಾಖೆ ನಿರ್ಲಕ್ಷ್ಯ ಮಾಡಿದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದಾರೆ.
ಗಾಯಾಳುಗಳಿಗೆ ದೇವದುರ್ಗ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಎನ್.ಗಣೇಕಲ್, ಜಾಲಹಳ್ಳಿ, ಕಮದಾಳು, ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.