ಪಶ್ಚಿಮ ಬಂಗಾಳ: ನಗರದ ಸಿಲಿಗುರಿಯ ಒಬ್ಬ ವ್ಯಕ್ತಿ ಒಸರು ನೀರನ್ನು ಕುಡಿದ ಭರದಲ್ಲಿ ಜಿಗಣೆ ನುಂಗಿ ಶ್ವಾಸಕೋಶದಲ್ಲಿ ಸಿಲುಕಿ ಸಮಸ್ಯೆಗೆ ಒಳಗಾಗಿದ್ದರು. 15 ದಿನ ನಂತರ ಚಿಕಿತ್ಸೆ ಮಾಡಿದಾಗ ಜೀವಂತ ಜಿಗಣೆ ಕಂಡು ವೈದ್ಯರೇ ಬೆಚ್ಚಿಬಿದ್ದ ಘಟನೆ ಬೆಳಕಿಗೆ ಬಂದಿದೆ
BIGG NEWS: ಸಾಗರದಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದುರ್ಮರಣ
ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಮಿರಿಕ್ನ ಸಜಿನ್ ರೈ (49) 15 ದಿನಗಳ ಹಿಂದೆ ಸ್ಥಳೀಯ ಚಿಲುಮೆಯಿಂದ ನೀರು ಕುಡಿಯಲು ಯತ್ನಿಸಿದಾಗ ಜಿಗಣೆ ಗಂಟಲಲ್ಲಿ ಸಿಲುಕಿಕೊಂಡಿತ್ತು. ನಂತರ ಅದು ಕ್ರಮೇಣ ಶ್ವಾಸನಾಳಕ್ಕೆ ಚಲಿಸಿತು. ಅಂದಿನಿಂದ, ಅವರು ಅಸ್ವಸ್ಥರಾಗಿದ್ದರು. ಸ್ಥಳೀಯ ಆಸ್ಪತ್ರೆಯವರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಲು ಸಲಹೆ ನೀಡಲಾಗಿತ್ತು.ಸಜಿನ್ ರೈ ಅವರ ಆರೋಗ್ಯ ಸ್ಥಿತಿ ಗಂಭೀರತೆ ಕಂಡು ಆಸ್ಪತ್ರೆ ವೈದ್ಯರ ತಂಡ ರಚಿಸಿ ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ. ಬುಧವಾರ ಒಂದೂವರೆ ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಜಿಗಣೆಯನ್ನು ಹೊರತರಲಾಯಿತು. ಜಿಗಣೆಯೂ ಜೀವಂತವಾಗಿತ್ತು. ರೈ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
BIGG NEWS: ಸಾಗರದಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದುರ್ಮರಣ
ನನ್ನ ಸುಮಾರು 40 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಶ್ವಾಸನಾಳದಲ್ಲಿ 15 ದಿನಗಳ ಕಾಲ ಜಿಗಣೆ ಜೀವಂತವಾಗಿರುವುದನ್ನು ನಾನು ನೋಡಿಲ್ಲ. ಇದೊಂದು ಅಪರೂಪದ ಘಟನೆ. ಸದ್ಯ ರೋಗಿ ಆರೋಗ್ಯವಾಗಿದ್ದಾರೆ ಇಎನ್ಟಿ ವಿಭಾಗದ ಮುಖ್ಯಸ್ಥ ರಾಧೇಶ್ಯಾಮ್ ಮಹತೋ ತಿಳಿಸಿದ್ದಾರೆ
BIGG NEWS: ಸಾಗರದಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದುರ್ಮರಣ