ಬೆಂಗಳೂರು : ಕಾಂಗ್ರೆಸ್ ನಲ್ಲಿ ಯಾವುದೇ ಕ್ರಾಂತಿ ಆಗಲ್ಲ ಬದಲಾವಣೆ ಆಗಬೇಕಿದ್ದರೆ ವರಿಷ್ಠರು ತೀರ್ಮಾನ ಕೈಗೊಳ್ಳಬೇಕು ಬದಲಾವಣೆ ಆಗಬೇಕಾದರೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಐದು ವರ್ಷ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ಸಧ್ಯ ಪ್ರಸ್ತುತ ಮತ್ತು ಅನಗತ್ಯವಾಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ತಿಳಿಸಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ನಾವು ನಂಬಿದ್ದೇವೆ. ಸಿದ್ದರಾಮಯ್ಯನಾಯಕತ್ವದಲ್ಲಿ ಜನಪರ ಕಾರ್ಯಕ್ರಮ ಕೊಡುತ್ತೇವೆ. ವ್ಯಕ್ತಿಗತವಾಗಿ ಯಾರೋ ಒಬ್ಬರು ಕ್ರಾಂತಿ ಅಂತ ಮಾತನಾಡುತ್ತಾರೆ ಇದೇನು ತಮಾಷೆ ಏನ್ರೀ? ಮುಂದಿನ ಬಜೆಟ್ ಗೆ ಸಿದ್ದರಾಮಯ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದರು.








