Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

OMG: ಆರು ತಿಂಗಳ ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ ಸಾವು; ಅದೃಷ್ಟವಶಾತ್ ಬದುಕುಳಿದ ಕಂದಮ್ಮ!

ಬೆಂಗಳೂರಿನಲ್ಲಿ ಹಲವೆಡೆ ವರುಣನ ಅಬ್ಬರ: ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ!

​ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ: ಮುಂದಿನ 24 ಗಂಟೆಗಳಲ್ಲಿ ಅಮೆರಿಕ-ಇರಾನ್ ‘ಶಾಂತಿ ಒಪ್ಪಂದ’ ಫೈನಲ್? ಪಾಕಿಸ್ತಾನದ ಮಹತ್ವದ ಹೇಳಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೃಹ ಬಳಕೆ ವಿದ್ಯುತ್‌ ಸಂಪರ್ಕ ಅನ್ಯ ಉದ್ದೇಶಕ್ಕೆ ಬಳಸಬೇಡಿ: ಬೆಸ್ಕಾಂ ವಾರ್ನಿಂಗ್
KARNATAKA

ಗೃಹ ಬಳಕೆ ವಿದ್ಯುತ್‌ ಸಂಪರ್ಕ ಅನ್ಯ ಉದ್ದೇಶಕ್ಕೆ ಬಳಸಬೇಡಿ: ಬೆಸ್ಕಾಂ ವಾರ್ನಿಂಗ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಗೃಹ ಬಳಕೆಗೆ ಪಡೆದ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯ ಹಾಗೂ ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.

ಗೃಹ ಬಳಕೆಗೆ ಪಡೆದ (ಎಲ್‌ಟಿ 1) ವಿದ್ಯುತ್‌ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್‌, ಸರ್ವೀಸ್ ಅಪಾರ್ಟ್‌ ಮೆಂಟ್‌, ಪೇಯಿಂಗ್‌ ಗೆಸ್ಟ್‌, ಕಚೇರಿ ಮುಂತಾದ ಉದ್ದೇಶಗಳಿಗೆ (ಎಲ್‌ಟಿ 1 ಸಂಪರ್ಕ) ಅನಧಿಕೃತವಾಗಿ ಬಳಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದ್ದಿದ್ದು, ಇಂತಹ ಸಂಪರ್ಕಗಳನ್ನು ತಕ್ಷಣವೇ ಕಡಿತಗೊಳಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.

ಗೃಹ ಬಳಕೆಯ ಉದ್ದೇಶಕ್ಕೆ ಪಡೆದ ವಿದ್ಯುತ್‌ ಸಂಪರ್ಕವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಗ್ರಾಹಕರು, ತಕ್ಷಣವೇ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಸಮರ್ಪಕ ವಿದ್ಯುತ್‌ ದರ ವರ್ಗದ (tariff category) ಬದಲಾವಣೆಗೆ ಅರ್ಜಿ ಸಲ್ಲಿಸಿ ಸಂಪರ್ಕವನ್ನು ನಿಯಮಾನುಸಾರ ಪಡೆಯುವಂತೆ ಬೆಸ್ಕಾಂ ವಿನಂತಿಸಿದೆ.
ಉತ್ಸವ, ಹಬ್ಬ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಕೂಡ ಗೃಹ ಬಳಕೆಯ ವಿದ್ಯುತ್‌ ಸಂಪರ್ಕವನ್ನು ಬಳಸಿಕೊಳ್ಳದೆ, ಸಂಬಂಧಿತ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.

ಗೃಹ ಬಳಕೆಯ ವಿದ್ಯುತ್‌ ಸಂಪರ್ಕವನ್ನು ಅನ್ಯ ಉದ್ದೇಶಗಳಿಗೆ ಬಳಸುವವರ ವಿರುದ್ಧ ವಿದ್ಯುತ್ ಅಧಿನಿಯಮ, 2003ರ ಕಲಂ 126 ಮತ್ತು 135 ಹಾಗೂ ವಿದ್ಯುತ್ ಸರಬರಾಜು ನಿಯಮಗಳ ಕಲಂ 42 ಮತ್ತು ಅದರ ಉಪಕಲಂಗಳ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಹಲವೆಡೆ ವರುಣನ ಅಬ್ಬರ: ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ!

1 Min Read

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

2 Mins Read
Recent News

OMG: ಆರು ತಿಂಗಳ ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ ಸಾವು; ಅದೃಷ್ಟವಶಾತ್ ಬದುಕುಳಿದ ಕಂದಮ್ಮ!

ಬೆಂಗಳೂರಿನಲ್ಲಿ ಹಲವೆಡೆ ವರುಣನ ಅಬ್ಬರ: ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ!

​ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ: ಮುಂದಿನ 24 ಗಂಟೆಗಳಲ್ಲಿ ಅಮೆರಿಕ-ಇರಾನ್ ‘ಶಾಂತಿ ಒಪ್ಪಂದ’ ಫೈನಲ್? ಪಾಕಿಸ್ತಾನದ ಮಹತ್ವದ ಹೇಳಿಕೆ!

​ಇರಾನ್ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ದಿನಾಂಕ ಪ್ರಕಟ: ಜುಲೈ 4 ರಿಂದ ವಿಧಿವಿಧಾನ ಆರಂಭ, ಜುಲೈ 9 ರಂದು ದಫನ!

State News
KARNATAKA

ಬೆಂಗಳೂರಿನಲ್ಲಿ ಹಲವೆಡೆ ವರುಣನ ಅಬ್ಬರ: ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ದಿಢೀರ್‌ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲ…

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.