ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯ ಮೇಲೆ ಕಿಡಿಗೇಡಿಗಳು ಲಾರೆನ್ಸ್ ಬಿಷ್ನೋಯ್ ಎಂದು ಹೆಸರು ಬರೆದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಕಿಡಿಗೇಡಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಹೌದು ನಂದಿ ಬೆಟ್ಟದಲ್ಲಿರುವ ಟಿಪ್ಪು ಅರಮನೆಯ ಮೇಲೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ನೋಯ್ ಹೆಸರು ಬರೆದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಂದಿಗಿರಿ ಧಾಮ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. PDLP, BNS ಸೆಕ್ಷನ್ 324 (2), 329 (3)ರ ಅಡಿ ದುಷ್ಕರ್ಮಿಗಳ ಮೇಲೆ ಕೇಸ್ ದಾಖಲಾಗಿದೆ.
ಚಿಕ್ಕಬಳ್ಳಾಪುರ ಎಸ್ ಪಿ ಕುಶಲ್ ಚೌಕ್ಸೆ ಸೂಚನೆಯ ಮೇರೆಗೆ ಕೇಸ್ ದಾಖಲಾಗಿದೆ. ಸದ್ಯ ಗ್ಯಾಂಗ್ ಸ್ಟರ್ ಬಿಷ್ನೋಯ್ ದೆಹಲಿಯ ತಿಹಾರ್ ಜೈಲಿನಲ್ಲಿ ಇದ್ದಾನೆ. ಅಂತಾರಾಷ್ಟ್ರೀಯ ಗ್ಯಾಂಗ್ ಸ್ಟರ್ ಆಗಿರುವ ಲಾರೆನ್ಸ್ ಬಿಷ್ನೋಯ್ ಹೆಸರನ್ನ ಟಿಪ್ಪು ಬೇಸಿಗೆ ಅರಮನೆಯ ಮೇಲೆ ಕೆತ್ತಲಾಗಿತ್ತು. ದುಷ್ಕರ್ಮಿಗಳು ಒಂದು ತಿಂಗಳ ಹಿಂದೆಯೇ ಹೆಸರು ಬರೆದಿದ್ದಾರೆ. ಎನ್ನುವ ಮಾಹಿತಿ ತಿಳಿದು ಬಂದಿದ್ದು ಬರಹ ಅಳಿಸಿ ಹಾಕಿರುವ ಪುರಾತತ್ವ ಮತ್ತು ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ. ಬಣ್ಣ ಬಳಿದು ಲಾರೆನ್ಸ್ ಬಿಷ್ನೋಯ್ ಹೆಸರು ಅಳಿಸಿ ಹಾಕಲಾಗಿದೆ.








