ವಿಜಯನಗರ: ಜಿಲ್ಲೆಯಲ್ಲಿ ಇಂದು ಸಿಡಿಲು ಬಡಿದು ಕೂಲಿಗೆ ತೆರಳಿದ್ದಂತ ವ್ಯಕ್ತಿ ಹಾಕು ಒಂದು ಆಕಳು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಲಿಡಿಲು ಬಡಿದ್ದರಿಂದ ಕೂಲಿ ಕಾರ್ಮಿಕ ಬೆಂಡಿಗೇರಿ ಹಾಲೇಶಪ್ಪ(48) ಸಾವನ್ನಪ್ಪಿದ್ದಾರೆ.
ಬೆಂಡಿಗೇರಿ ಹಾಲೇಶಪ್ಪ ಹೊಲಕ್ಕೆ ಆಕಳು ಮೇಯಿಸೋದಕ್ಕೆ ತೆರಳಿದ್ದರು. ಈ ವೇಳೆ ಮಳೆಯ ಕಾರಣದಿಂದ ಮರದಡಿ ಆಶ್ರಯ ಪಡೆದಿದ್ದರು.
ಮಳೆಯ ಜೊತೆಗೆ ಸಿಡಿಲು ಬಡಿದು ಮರದಡಿ ಇದ್ದಂತ ಬೆಂಡಿಗೇರಿ ಹಾಲೇಶಪ್ಪ ಹಾಗೂ ಆಕಳು ಸಾವನ್ನಪ್ಪಿದ್ದಾವೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಮಕ್ಕಳು ಸಾವು, 800 ಗುಡಿಸಲುಗಳು ಸುಟ್ಟು ಭಸ್ಮ
ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat