ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ವಿರುದ್ಧ ಅವರ ಕುರುಬ ಸಮುದಾಯದ ಮುಖಂಡರು ಹಾಗೇ ಅವರ ಆಪ್ತರೇ ಅವಹೇಳನಕಾರಿಯಾಗಿ ಮಾತನಾಡಿರುವುದು ಹೊರಬಿದ್ದಿದೆ ಎನ್ನಲಾಗಿದೆ. ನಮ್ಮ ಟಗರು ಇದೆಯಲ್ಲಾ ಮುರುಘಾ ಸ್ವಾಮೀಜಿಯಂತೆ ಕಳ್ಳ ಎಂಬುದಾಗಿ ಸಿದ್ಧರಾಮಯ್ಯ ವಿರುದ್ಧವೇ ಗುಡುಗಿರುವಂತ ವಿಚಾರ ಬಹಿರಂಗ ವೇದಿಕೆಯಲ್ಲಿಯೇ ಗುಸುಗುಸು ಪಿಸುಪಿಸು ಮೂಲಕ ಹೊರ ಬಿದ್ದಿದ್ದು, ವೀಡಿಯೋ ಈಗ ವೈರಲ್ ಕೂಡ ಆಗಿದೆ.
ಇಂದು ಕುರುಬ ಸಮುದಾಯದ ಮುಖಂಡರು ಸುದ್ಧಿಗೋಷ್ಠಿಯ ವೇಳೆಯಲ್ಲಿ ಗುಸು ಗುಸು ಪಿಸು ಪಿಸು ಮಾತನಾಡಿರುವ ವಿಷಯದಿಂದಾಗಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟುಗ ಮಾಡಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿರೋ ವಿಷಯ ಬೆಳಕಿಗೆ ಬಂದಿದೆ.
BIGG NEWS : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿಗಾಗಿ ಅರ್ಜಿ ಆಹ್ವಾನ
ಸಿದ್ದು ಆಪ್ತರಾಗಿದ್ದಂತ ಕುರುಬ ಸಮುದಾಯದ ಮುಕುಡಪ್ಪ ಮತ್ತು ಎಸ್ ಪುಟ್ಟಸ್ವಾಮಿಯವರು ಪಿಸು ಮಾತನಿಲ್ಲಿ ಮುರುಘಾ ಸ್ವಾಮೀಜಿ ವಿಷಯ ಹೊರ ಬರುತ್ತಿದ್ದಂತೆ ನಮ್ಮ ಟಗಲು ಏನ್ ಕಡಿಮೆನಾ 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ. ಕೆಲವರ ವಿಷಯ ಹೊರಬರುತ್ತೆ. ಇಂತ ವಿಚಾರಗಳಲ್ಲಿ ಸಿದ್ದು ತುಂಬಾ ಹುಷಾರು, ಸಿದ್ಧರಾಮಯ್ಯ ನೋಡಿ ಕಲಿಯಬೇಕು ಎಂದು ಮಾತನಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಮುಕುಡಪ್ಪ ಹಾಗೂ ಎಸ್ ಪುಟ್ಟಸ್ವಾಮಿಯವರು ಸಿದ್ಧರಾಮಯ್ಯ ವಿಷಯವಾಗಿ ಮಾತನಾಡಿಕೊಳ್ಳುತ್ತಿರೋದು ಖಾಸಗೀ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡು ಸಿದ್ಧರಾಮಯ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೇ ಯಾವ ವಿಷಯ ಇಟ್ಟುಕೊಂಡು ಸಿದ್ಧರಾಮಯ್ಯ ಬಗ್ಗೆ ಕುರುಬ ಸಮುದಾಯದ ಮುಖಂಡರು ಮಾತನಾಡುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ.
ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ: ಸಂಪೂರ್ಣ ತನಿಖೆಯಾಗುವವರೆಗೆ ತೀರ್ಮಾನಕ್ಕೆ ಬರಬಾರದು – ಸಿಎಂ ಬೊಮ್ಮಾಯಿ