ರಾಮನಗರ: ಕೆಂಪೇಗೌಡ ಪ್ರತಿಮೆ ವಿಚಾರದಲ್ಲಿ ಚುನಾವಣಾ ಕಾಲದಲ್ಲಿ ಜೆಡಿಎಸ್ ( JDS ) ರಾಜಕೀಯ ಮಾಡುತ್ತಿದೆ. ಅಶ್ವತ್ಥನಾರಾಯಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮನೆಗೆ ಹೋಗಿ ಕರೆದು ಬಂದಿದ್ದರೇ, ಸಿಎಂ ಬೊಮ್ಮಾಯಿ ( CM Bommai ) ಕರೆ ಮಾಡಿ ಆಹ್ವಾನಿಸಿದ್ದಾರೆ. ಆದರೂ ಈಗ ರಾಜಕೀಯ ಮಾಡುತ್ತಿದೆ. ಇದರ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿಗೆ ( Farmer CM HD Kumaraswamy ) ಒಕ್ಕಲಿಗರ ಮತಗಳು ಬಿಜೆಪಿಯತ್ತ ವಾಲುವ ಆತಂಕ ಕಾಡುತ್ತಿದೆ ಎಂಬುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ( Farmer Minister CP Yogeshwar ) ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕುಮಾರಸ್ವಾಮಿಯವರನ್ನು ಜನತೆ ತಿರಸ್ಕಾರ ಮಾಡುತ್ತಿದ್ದಾರೆ. ಅವರು ಎರಡು ಬಾರಿ ವಿಫಲವಾಗಿರುವ ನಾಯಕರಾಗಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡದ ಅವರು, ಈಗ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಕೆಂಪೇಗೌಡ ಪ್ರತಿಮೆ ನಿರ್ಮಾಣದ ಬಳಿಕ ಒಕ್ಕಲಿಗ ಸಮಾಜ ಕೂಡ ಬಿಜೆಪಿ ಪರ ಒಲವು ತೋರಿಸುತ್ತಿದೆ. ಇದೇ ಒಕ್ಕಲಿಗರ ಮತಗಳಿಗೆ ಜೆಡಿಎಸ್ ಡಿಪೆಂಡ್ ಆಗಿದೆ. ಹೀಗಾಗಿ ಈಗ ಮಾಜಿ ಸಿಎಂ ಕುಮಾರಸ್ವಾಮಿಗೆ ಒಕ್ಕಲಿಗರ ಮತಗಳು ಕೈತಪ್ಪಿ ಹೋಗುವಂತ ಆತಂಕದಲ್ಲಿ ಇಲ್ಲ ಸಲ್ಲದ ಆರೋಪದ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದರು.