ಬೆಂಗಳೂರು: ರಾಜ್ಯ ಸರ್ಕಾರವು ( Karnataka Government ) ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಿದ್ದರೂ ಸಹ 58ನೇ ವಯಸ್ಸಿನಲ್ಲಿ ಉದ್ಯೋಗಿಯೊಬ್ಬರನ್ನು ನಿವೃತ್ತಿಗೊಳಿಸಿದ ಆರೋಪದ ಮೇಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (Karnataka State Cricket Association – KSCA) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ( High Court of Karnataka ) ಗುರುವಾರ ಆದೇಶಿಸಿದೆ.
ಕೆಎಸ್ಸಿಎಯ ನಿವೃತ್ತ ಉದ್ಯೋಗಿ ಜೆ.ರಾಜಾ ಕುಮಾರ್ ಅವರು ಕಾರ್ಮಿಕ ಇಲಾಖೆ ( Department of Labour ) ಮತ್ತು ಸಂಘದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರು ನೋಟಿಸ್ ಜಾರಿಗೊಳಿಸಲು ಆದೇಶಿಸಿದರು.
BIG NEWS: ನಾನು ಟಗರು ಸೂ..ಮಗಂದು ಬಲು ಗಟ್ಟಿ ಅಂದಿದ್ದು ನಿಜ – ಕಾಂಗ್ರೆಸ್ ಮುಖಂಡ ಕೆ.ಮುಕುಡಪ್ಪ
ಕರ್ನಾಟಕ ಕೈಗಾರಿಕಾ ಸ್ಥಾಪನೆ (ಸ್ಥಾಯಿ ಆದೇಶಗಳು) ನಿಯಮಗಳು, 1961 ರ ಅನುಸೂಚಿ -1 ಕ್ಕೆ ತಿದ್ದುಪಡಿ ಮಾಡಿ ಕರ್ನಾಟಕ ಸರ್ಕಾರವು 2017 ರ ಮಾರ್ಚ್ 27 ರಂದು ಹೊರಡಿಸಿದ ಗೆಜೆಟಿ ಅಧಿಸೂಚನೆಯ ಪ್ರಕಾರ ತಮ್ಮ ನಿವೃತ್ತಿಯ ಆದೇಶವನ್ನು ಮರುಪರಿಶೀಲಿಸುವಂತೆ ಕೆಎಸ್ಸಿಎಗೆ ಜುಲೈ 11, 2022 ರಂದು ಪತ್ರ ಬರೆದಿದ್ದೇನೆ ಎಂದು ಅರ್ಜಿದಾರರು ಹೇಳಿದ್ದಾರೆ.
BREAKING NEWS : ವಿಜಯಪುರದಲ್ಲಿ ಬೈಕ್ ಗೆ ಕ್ರೂಸರ್ ಡಿಕ್ಕಿಯಾಗಿ ತಂದೆ-ಮಗಳ ದಾರುಣ ಸಾವು
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿ 60 ವರ್ಷಗಳು ಎಂದು ಹೈಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಹೇಳಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮಾರ್ಚ್ 13, 2022 ರಂದು 58 ನೇ ವಯಸ್ಸಿಗೆ ಬಂದ ನಂತರ ರಾಜಾ ಕುಮಾರ್ ಅವರು ಕೆಎಸ್ಸಿಎಯಿಂದ ನಿವೃತ್ತರಾಗಿದ್ದರು.