Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ
KARNATAKA

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು/ಕೊಚ್ಚಿನ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಕೇವಲ ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲದೆ, ತನ್ನ ಸಿಬ್ಬಂದಿಗಳ ಕಾರ್ಯದಕ್ಷತೆ ಹೆಚ್ಚಿಸುವ ‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ (Training and Organisation Development) ವಿಭಾಗದಲ್ಲಿಯೂ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಪ್ರತಿಷ್ಠಿತ World HRD Congress ವತಿಯಿಂದ ನೀಡಲಾಗುವ ‘ಕೇರಳ ಲೀಡರ್ ಶಿಪ್ ಪ್ರಶಸ್ತಿ-2026’ ಅನ್ನು ಕೆಎಸ್‌ಆರ್‌ಟಿಸಿ ಮುಡಿಗೇರಿಸಿಕೊಂಡಿದೆ.

ಮಾರ್ಚ್ 31ರಂದು ಕೇರಳದ ಕೊಚ್ಚಿನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.

ಸಾಧನೆಯ ಹಿಂದಿನ ಶಕ್ತಿ: ವೈವಿಧ್ಯಮಯ ತರಬೇತಿ ಕಾರ್ಯಕ್ರಮಗಳು

ನಿಗಮದ ವ್ಯಾಪ್ತಿಯಲ್ಲಿರುವ 5 ಪ್ರಮುಖ ತರಬೇತಿ ಕೇಂದ್ರಗಳು ಕಳೆದ 6 ತಿಂಗಳ ಅವಧಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಬದಲಾವಣೆಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅತ್ಯಾಧುನಿಕ ಹಾಗೂ ಪರಿಣಾಮಕಾರಿ ತರಬೇತಿ ನೀಡುವ ಮೂಲಕ ನಿಗಮವು ಸಾರಿಗೆ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ.

ಪ್ರಮುಖ ತರಬೇತಿ ಅಂಶಗಳು:

  • ಸುರಕ್ಷತೆ ಮತ್ತು ದಕ್ಷತೆ: ಇಂಧನ ಕ್ಷಮತೆ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ ಮತ್ತು ಸಿಮ್ಯುಲೇಟರ್ ಆಧಾರಿತ ತರಬೇತಿಗಳಿಗೆ ವಿಶೇಷ ಒತ್ತು ನೀಡಲಾಗಿದೆ.

  • ಸಾಮಾಜಿಕ ಕಳಕಳಿ: ಪಿ.ಎಂ.ಅಜಯ್ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಹಾಗೂ ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿಯೊಂದಿಗೆ ಉಚಿತ ಪರವಾನಗಿ (DL) ವಿತರಿಸುವ ಮೂಲಕ ಸಾಮಾಜಿಕ ಸಬಲೀಕರಣಕ್ಕೆ ಶ್ರಮಿಸಿದೆ.

  • ವೃತ್ತಿಪರತೆ: ಹೊಸದಾಗಿ ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರು, ಕರಾಸಾ ಪೇದೆಗಳು ಮತ್ತು ಕಿರಿಯ ಸಹಾಯಕರಿಗೆ ವೃತ್ತಿ ಪರಿಚಯ ಹಾಗೂ ಜವಾಬ್ದಾರಿಗಳ ಕುರಿತು ತರಬೇತಿ ನೀಡಲಾಗಿದೆ.

  • ನಿರಂತರ ಕಲಿಕೆ: ಮೇಲ್ವಿಚಾರಕರು ಹಾಗೂ ಆಡಳಿತ ಸಿಬ್ಬಂದಿಗಳಿಗೆ ಪುನಃಶ್ಚೇತನ ತರಬೇತಿ ನೀಡುವ ಮೂಲಕ ನಿಗಮದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದೆ.

ಪ್ರಶಸ್ತಿ ಪ್ರದಾನ ಮತ್ತು ಗೌರವ

ಕೊಚ್ಚಿನ್‌ನಲ್ಲಿ ನಡೆದ ಸಮಾರಂಭದಲ್ಲಿ College of Ship Technology ನಿರ್ದೇಶಕರಾದ ಕ್ಯಾಪ್ಟನ್ ಎಸ್.ಟಿ. ಶ್ರೀಧರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೆಎಸ್‌ಆರ್‌ಟಿಸಿ ಪರವಾಗಿ ಮಂಡಳಿಯ ಕಾರ್ಯದರ್ಶಿ ಹಾಗೂ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಹಾಗೂ ಹಾಸನದ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲೆ ಎ.ಎನ್ ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು:

ನಿಗಮದ ಅಭಿವೃದ್ಧಿಗೆ ಹೊಸ ವೇಗ

ಕೇವಲ 6 ತಿಂಗಳ ಅವಧಿಯಲ್ಲಿ ನಿಗಮದ ತರಬೇತಿ ಸೂಚ್ಯಂಕವು (Training Index) ಗಮನಾರ್ಹವಾಗಿ ಏರಿಕೆಯಾಗಿರುವುದು ಈ ಪ್ರಶಸ್ತಿಯ ಮೂಲಕ ಸಾಬೀತಾಗಿದೆ. ಸಿಬ್ಬಂದಿಗಳ ಕೌಶಲ್ಯ ಅಭಿವೃದ್ಧಿಯು ಅಂತಿಮವಾಗಿ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗುಮ ಪ್ರಯಾಣದ ಅನುಭವವನ್ನು ನೀಡಲು ಸಹಕಾರಿಯಾಗಲಿದೆ ಎಂಬುದು ನಿಗಮದ ಆಶಯವಾಗಿದೆ.

ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಸಮೀಕ್ಷೆ ಪೂರ್ಣಗೊಳಿಸಿ ಬೆಳೆಹಾನಿಗೆ ಪರಿಹಾರ – ಸಚಿವ ಸಂತೋಷ್ ಲಾಡ್

GOOD NEWS: ರಾಜ್ಯ ಸರ್ಕಾರದಿಂದ ‘ದಿನಗೂಲಿ ನೌಕರ’ರಿಗೆ ಸಿಹಿಸುದ್ದಿ: 5 ಲಕ್ಷದವರೆಗೆ ನಗದು ರಹಿತ ‘ಉಚಿತ ಆರೋಗ್ಯ ಯೋಜನೆ’ ಜಾರಿ

Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.