ಬೆಂಗಳೂರು: ಹೊರ ರಾಜ್ಯ ದ ಪ್ರಯಾಣಿಕರಿಗೆ ವಂಚಿಸುತ್ತಿದ್ದ ಖಾಸಗಿ ಏಜೆಂಟ್ ಹಿಡಿದು ಪೊಲೀಸರಿಗೆ ಕೆ ಎಸ್ ಆರ್ ಟಿ ಸಿ ( KSRTC ) ಜಾಗೃತ ಸಿಬ್ಬಂದಿ ಒಪ್ಪಿಸಿದ್ದಾರೆ. ಅಲ್ಲದೇ ಕೆ ಎಸ್ ಆರ್ ಟಿಸಿಯಿಂದ ನೀಡಲಾದಂತ ದೂರಿನ ಹಿನ್ನಲೆಯಲ್ಲಿ, ಎಫ್ಐಆರ್ ಕೂಡ ದಾಖಲಿಸಲಾಗಿದೆ.
ದಿನಾಂಕ 02.10.2022 ರಂದು ಮೆಜೆಸ್ಟಿಕ್ ಬಳಿ ಓರಿಸ್ಸಾ ರಾಜ್ಯದ ಇಬ್ಬರು ಪ್ರಯಾಣಿಕರುಗಳಿಗೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ರೂ 3000/-ಪಡೆದು ತಲಾ ರೂ 396/-ಟಿಕೆಟ್ ನೀಡಿ ವಂಚನೆ ಮಾಡಿರುವ ಬಗ್ಗೆ ತಿಳಿದು ಬಂದಿತ್ತು. ಈ ಮಾಹಿತಿ ಹಿನ್ನಲೆಯಲ್ಲಿ ವಂಚನೆ ಪ್ರಕರಣಗಳ ಕುರಿತು ಅಗತ್ಯ ಕ್ರಮ ವಹಿಸಲು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಜಾಗೃತ ತಂಡವನ್ನು ರಚಿಸಿ, ಕಾರ್ಯಾಚರಣೆಗೆ ಇಳಿದಿದೆ.
ಬುದ್ಧ, ಬಸವ, ಅಂಬೇಡ್ಕರ್ ವಾಲ್ಮೀಕಿ ನಮ್ಮ ಆದರ್ಶ -ಸಿಎಂ ಬಸವರಾಜ ಬೊಮ್ಮಾಯಿ
ವಂಚಕರ ಬೆನ್ನು ಬಿದ್ದಂತ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ನೇತೃತ್ವದ ತಂಡವು, ದಿನಾಂಕ 14.10.2022 ರಂದು ಬೆಳಗ್ಗೆ ಒರಿಸ್ಸಾ ರಾಜ್ಯದಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ನಂತರ ಮಂಗಳೂರಿಗೆ ಪ್ರಯಾಣಿಸಲು ಮೆಜೆಸ್ಟಿಕ್ ಗೆ ಆಗಮಿಸಿದ್ದ ಓರಿಸ್ಸಾ ರಾಜ್ಯದ ಇಬ್ಬರು ವ್ಯಕ್ತಿಗಳನ್ನು ಖಾಸಗಿ ಏಜೆಂಟ್ ಗಂಗರಾಜು ಎಂಬುವವರು KSRTC ಬಸ್ ನಲ್ಲಿ ಸದರಿ ಪ್ರಯಾಣಿಕರನ್ನು ಮಂಗಳೂರಿಗೆ ಕಳುಹಿಸಲು ಸದರಿ ವ್ಯಕ್ತಿ ಗಳಿಂದ ರೂ 2600/- ಅನ್ನು ಪಡೆದು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕರೆದು ಕೊಂಡು ಬಂದು ಬಸ್ ಗೆ ಹತ್ತಿಸಲು ನಿಂತಿದ್ದಾರೆ.
ಈ ಬಗ್ಗೆ ಅನುಮಾನಗೊಂಡ ಜಾಗೃತ ತಂಡದ ಸಿಬ್ಬಂದಿಗಳು, ಆ ವ್ಯಕ್ತಿಗಳನ್ನು ವಿಚಾರಿಸಿದಾಗ, ಖಾಸಗಿ ಏಜೆಂಟ್ ತಲಾ ರೂ 398/- ರಂತೆ ರೂ 796/- ಟಿಕೆಟ್ ದರಕ್ಕೆ ಬದಲಾಗಿ ರೂ 2600/- ಅನ್ನು ಪಡೆದು ವಂಚಿಸಿರುವುದನ್ನು ಪತ್ತೆ ಮಾಡಿದೆ. ಈ ಬಳಿಕ ಖಾಸಗಿ ಏಜೆಂಟ್ ಅನ್ನು ಹಿಡಿದು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ( Upparapete Police Station ) ಒಪ್ಪಿಸಿದೆ. ಬಳಿಕ ದೂರು ನೀಡಿದ ಹಿನ್ನಲೆಯಲ್ಲಿ, ಖಾಸಗೀ ಎಜೆಂಟ್ ವಿರುದ್ಧ 167/2022 ಕಲಂ 420 ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಹೊರ ರಾಜ್ಯದ ಪ್ರಯಾಣಿಕರನ್ನು ವಂಚಿಸುತ್ತಿದ್ದ ವಂಚಕನಿಗೆ ಕೆ ಎಸ್ ಆರ್ ಟಿ ಸಿ ಬಿಗ್ ಶಾಕ್ ಕೊಟ್ಟಿದೆ.