ಬೆಂಗಳೂರು : ಮಡಿಕೇರಿಯಲ್ಲಿ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ʻ ನಾವು ಹೋರಾಟ ಶುರು ಮಾಡುವಾಗೆಲ್ಲ 144 ಸೆಕ್ಷನ್ ಹಾಕಿ ಕೇಸ್ ಹಾಕೋದು ಸರ್ಕಾರದ ಚಾಳಿಯಾಗಿದೆ ಎಂದು ಕೆಂಡಾಮಂಡಲರಾಗಿದ್ದಾರೆ.
ಮೊಟ್ಟೆ ಎಸೆದ ಪ್ರಕರಣ ವಿರೋಧಿ ಆಗಸ್ಟ್ 26 ರಂದು ಕಾಂಗ್ರೆಸ್ ಆಯೋಜಿಸಿದ್ದ ಮಡಿಕೇರಿ ಚಲೋ ರದ್ದು ಮಾಡಿದ ಹಿನ್ನೆಲೆ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ನಾವು ಹೋರಾಟ ಶುರು ಮಾಡುವಾಗೆಲ್ಲ 144 ಸೆಕ್ಷನ್ ಹಾಕಿ ಕೇಸ್ ಹಾಕೋದು ಬಿಜೆಪಿ ಸರ್ಕಾರದ ಚಾಳಿಯಾಗಿದೆ. ಈ ಸರಕಾರ ಭಯದಿಂದಲೇ ನಡೆಯುತ್ತಿದೆ. ಈ ಬಗ್ಗೆ ಶಾಸಕಾಂಗ ಪಕ್ಷದ ನಾಯಕರ ಜತೆ ಮಾತಾಡಿ ಮುಂದಿನ ನಿರ್ಧಾರ ತಿಳಿಸ್ತೇವೆ ಎಂದಿದ್ದಾರೆ.