ಬೆಳಗಾವಿ: ಅಮಾಯಕನ ಅವಾರ್ಡ್ ಸ್ವೀಕರಿಸುವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.ಇದೇ ವೇಳೆ ಅವರು ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ನಾನು ಸ್ವೀಕಾರ ಮಾಡುವೆ ಅಂತ ಟಾಂಗ್ ನೀಡಿದರು.
ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಏನು ಹೇಳಿದರು ಕೂಡ ನಮ್ಮ ಕಾಂಗ್ರೆಸ್ ಭಯೋತ್ಪದನೆಯನ್ನು ವಿರೋಧಿಸುತ ಬಂದಿದೆ. ನಾವು ಇದ್ದಗಾಗ ಭಯೋತ್ಪದನೆಯನ್ನು ದಮನ ಮಾಡಿದ್ದೆವೆ ಅಂತ ಹೇಳಿದರು. ಇದೇ ವೇಳೆ ಅವರು ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ವನ್ನು ಮುಂದೆ ತಂದಿದೆ. ಗೃಹ ಸಚಿವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಂತ ಕಿಡಿಕಾರಿದರು. ಇನ್ನೂ ಸಿದ್ದರಾಮಯ್ಯ ಬಸ್ ಯಾತ್ರೆಗೆ ಕಂಡೀಷನ್ ಹಾಕಿಲ್ಲ.. ಪಕ್ಷದ ತೀರ್ಮಾನವೇ ಅಂತಿಮ ಅಂತ ತಿಳಿಸಿದರು.