ಹುಬ್ಬಳ್ಳಿ: ನಿನ್ನೆ ರಮೇಶ್ ಕುಮಾರ್ ( Farmer Speaker Ramesh Kumar ) ಮೂರು ತಲೆಮಾರಿಗಾಗುವಷ್ಟು ಕಾಂಗ್ರೆಸ್ ಆಸ್ತಿ-ಹಣ ಮಾಡಿಕೊಂಡಿದೆ ಎಂಬ ಹೇಳಿಕೆದ್ದರು. ಅವರು ಹೇಳಿದ್ದು ಸರಿಯಾಗಿದೇ, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಅವರು ಸಮರ್ಥಿಸಿಕೊಂಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಮೇಶ್ ಕುಮಾರ್ ಹೇಳಿಕೆಗೆ ಬೇರೆ ಅರ್ಥವನ್ನು ಕಲ್ಪಿಸಲಾಗುತ್ತಿದೆ. ಅದು ಬೇಡ. ಅವರು ಹೇಳಿದ್ದು ಸರಿಯಾಗಿದೆ. ಆದ್ರೇ ಅವರ ಹೇಳಿಕೆಯನ್ನೇ ತಿರುಚಲಾಗಿದೆ. ಒಮ್ಮೆ ಬೇಕಾದ್ರೆ ಅವರ ಭಾಷಣ ಕೇಳಿ, ಅವರು ಸರಿಯಾಗಿಯೇ ಹೇಳಿದ್ದಾರೆ ಎಂಬುದಾಗಿ ಹೇಳಿದರು.
ವಿಪತ್ತು ನಿರ್ವಹಣೆಯ ಕರ್ನಾಟಕ ವಿನೂತನ ಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ – ಸಿಎಂ ಬೊಮ್ಮಾಯಿ
ರಮೇಶ್ ಕುಮಾರ್ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ಬಲಿಷ್ಠರನ್ನಾಗಿ ಮಾಡಿದ್ದಾರೆ. ಅದನ್ನೇ ಮೂರು ತಲೆಮಾರು ಆಸ್ತಿ ಅಂತ ಅವರು ಹೇಳಿದ್ದಾರೆ. ಆಸ್ತಿ ಅಂದ್ರೇ ಹಾಗಲ್ಲ, ಸಂವಿಧಾನ ಕೊಟ್ಟಿದ್ದಾರೆ, ಉಳುವವನಿಗೆ ಭೂಮಿ ಕಾಯ್ದೆ ನೀಡಿದ್ದಾರೆ ಅದು ಆಸ್ತಿ ಅಲ್ವಾ.? ಎಂಬುದಾಗಿ ಹೇಳುವ ಮೂಲಕ ರಮೇಶ್ ಕುಮಾರ್ ಹೇಳಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡರು.
‘ಭಗವತಿ ಏತ ನೀರಾವರಿ ಯೋಜನೆ’ಗೆ ‘ಸಚಿವ ಸಂಪುಟ’ ಅಸ್ತು – ಸಚಿವ ಗೋವಿಂದ ಕಾರಜೋಳ